ಎಸ್ ವೈ ಎಸ್ ಆಝಾದ್ ನಗರ ಮಾಸ್ತಿಕಟ್ಟೆ ಬ್ರಾಂಚ್ ಮಹಾಸಭೆಯು ಆಝಾದ್ ನಗರದಲ್ಲಿ ನಡೆಯಿತು.
ನೂತನಾಧ್ಯಕ್ಷರಾಗಿ ರಫೀಖ್, ಪ್ರಧಾನ ಕಾರ್ಯದರ್ಶಿಯಾಗಿ ಫಾರೂಖ್ ಹಾಗು ಕೋಶಾಧಿಕಾರಿಯಾಗಿ ಮುಹಮ್ಮದ್ ಫ್ಯಾನ್ಸಿ ರವರನ್ನು ಆಯ್ಕೆ ಮಮಾಡಲಾಯಿತು.
ಈ ಸಂದರ್ಭದಲ್ಲಿ ಎಸ್ ವೈ ಎಸ್ ಮಂಜೇಶ್ವರ ಮಂಡಲ ಅಧ್ಯಕ್ಷರಾದ ಶರೀಫ್ ಸಹದಿ, ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಹನೀಫ್ ಹಾಜಿ, ಉಳ್ಳಾಲ ನಗರ ಸಭಾ ಸದಸ್ಯ ಶೌಕತ್,ಸಯ್ಯಿದ್ ಮದನಿ ಅರಬಿಕ್ ಎಜ್ಯುಕೇಶನಲ್ ಟ್ರಸ್ಟ್ ಇದರ ಮಾಜಿ ಕಾರ್ಯದರ್ಶಿ ಝಿಯಾದ್ ತಂಗಳ್,ಎಸ್ ವೈ ಎಸ್ ಉಳ್ಳಾಲ ಸೆಂಟರ್ ಪ್ರ ಕಾರ್ಯದರ್ಶಿ ತ್ವಾಹಿರ್ ಹಾಜಿ, ಎಸ್ ವೈ ಎಸ್ ಉಳ್ಳಾಲ ಸೆಂಟರ್ ಕೋಶಾಧಿಕಾರಿ ಇಸಾಕ್ ರಹ್ಮಾನಿಯ, ಎಸ್ಸೆಸ್ಸೆಫ್ ದ.ಕ ಜಿಲ್ಲಾ ಮಾಜಿ ಕೋಶಾಧಿಕಾರಿ ಅಲ್ತಾಫ್ ಕುಂಪಲ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಮಾಜಿ ಕೋಶಾಧಿಕಾರಿ ಇಲ್ಯಾಸ್ ಕೈಕೋ ಹಾಗು ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.
ಎಸ್ ವೈ ಎಸ್ ಉಳ್ಳಾಲ ಝೋನ್ ನೇತ್ರತ್ವದಲ್ಲಿ ಎಸ್ ವೈ ಎಸ್ ಮಂಚಿಲ ಸರ್ಕಲ್ ರಚನಾ ಸಭೆ ಉಳ್ಳಾಲ ಮಂಚಿಲದ ಮಂಬವುಲ್ ಉಲೂಂ ಮದ್ರಸ ಸಭಾ ಭವನದಲ್ಲಿ ನಡೆಯಿತು. ಮಂಚಿಲದ ಅಲ್ ಮಸ್ಜಿದುಲ್ ಮುನವ್ವರ್ ಖತೀಬರಾದ ಮುಹಮ್ಮದ್ ಮುದ್ರಿಕ ಮದನಿ ದುಆ ನೆರವೇರಿಸಿದರು. ಸರ್ಕಲ್ ರಚನೆಯ ವೀಡಿಯೋ ನೋಡಲು ನನ್ನನ್ನು ಮುಟ್ಟಿ ಝೋನ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ಸಭೆಯನ್ನು ಉದ್ಘಾಟಿಸಿ ಸಮಾಜದ, ಸಮುದಾಯದ ಸಬಲೀಕರಣ, ಸಾಂಘಿಕ ಶಕ್ತಿ ಮತ್ತು ನಾಯಕರುಗಳ ಸೃಷ್ಟಿಗೆ ಉಳ್ಳಾಲ ಝೋನ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಶಾಖೆಗಳನ್ನು ಸೇರಿಸಿ ಸರ್ಕಲ್ ಗಳನ್ನು ರಚಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು. ಪ್ರಸ್ತುತ ಸಭೆಯಲ್ಲಿ ಅಕ್ಕರೆಕೆರೆ, ಹಳೆಕೋಟೆ, ಮಂಚಿಲ ಮತ್ತು ಮಾರ್ಗತಲೆ ಶಾಖೆಗಳನ್ನು ಸೇರಿಸಿ ಮಂಚಿಲ ಸರ್ಕಲನ್ನು ರಚಿಸಿ ನೂತನ ಸಮಿತಿಯನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಶಮೀರ್ ಸಖಾಫಿ ಅಕ್ಕರೆಕೆರೆ, ಪ್ರಧಾನ ಕಾರ್ಯದರ್ಶಿಯಾಗಿ ಶರೀಫ್ ಮಾರ್ಗತಲೆ, ಕೋಶಾಧಿಕಾರಿಯಾಗಿ ಇರ್ಫಾನ್ ಮಂಚಿಲ, ಉಪಾಧ್ಯಕ್ಷರಾಗಿ ಮುಹಮ್ಮದ್ ಮದನಿ ಹಳೆಕೋಟೆ, ದಅವಾ ಕಾರ್ಯದರ್ಶಿಯಾಗಿ ಆರ್ ಕೆ ಮದನಿ ಅಕ್ಕರೆಕೆರೆ, ಇಸಾಬಃ ಕಾರ್ಯದರ್ಶಿಯಾಗಿ ಸಯೀದ್ ಮಂಚಿಲ, ಸಂಘಟನಾ ಕಾರ್ಯದರ್ಶಿಯಾಗಿ ಹಮೀದ್ ಹಳೆಕೋಟೆ ಮತ್ತು ಮಾಧ್ಯಮ ವಕ್ತಾರರಾಗಿ ನವಾಝ್ ಸಖಾಫಿ ಉಳ್ಳಾಲ ಇವರನ್ನು ಆಯ್ಕೆ ಮಾಡಲಾಯಿತು. ...
Comments