ಎಸ್ ವೈ ಎಸ್ ಹಳೆಕೋಟೆ ಅಕ್ಕರೆಕೆರೆ ಬ್ರಾಂಚ್ ಹಾಗು ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆ ಜಂಟಿ ಆಶ್ರಯದಲ್ಲಿ ರಿಫಾಯೀ ಶೈಖ್ ಅನುಸ್ಮರಣೆ, ರಿಫಾಯಿ ಮೌಲಿದ್ ಮಜ್ಲಿಸ್, ಅರ್ಹ ಬಡ ಕುಟುಂಬಗಳಿಗೆ ರೇಷನ್ ವಿತರಣೆ
ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆ ಹಾಗು ಎಸ್ ವೈ ಎಸ್ ಹಳೆಕೋಟೆ ಅಕ್ಕರೆಕೆರೆ ಬ್ರಾಂಚ್ ಜಂಟಿ ಆಶ್ರಯದಲ್ಲಿ ರಿಫಾಯೀ ಶೈಖ್ ಅನುಸ್ಮರಣಾ ಕಾರ್ಯಕ್ರಮ ಎಸ್ ವೈ ಎಸ್ ಹಳೆಕೋಟೆ ಅಕ್ಕರೆಕೆರೆ ಬ್ರಾಂಚ್ ಅಧ್ಯಕ್ಷ ಅಬ್ದುಸ್ಸಮದ್ ಹಳೆಕೋಟೆ ಇವರ ಅಧ್ಯಕ್ಷತೆಯಲ್ಲಿ ಅಕ್ಕರೆಕೆರೆಯ ಸ್ಟೂಡೆಂಟ್ಸ್ ಹೌಸ್ ನಲ್ಲಿ ಜರುಗಿತು. ಎಸ್ಸೆಸ್ಸೆಫ್ ಅಕ್ಕರೆಕೆರೆ ಉಪಾಧ್ಯಕ್ಷರಾದ ಶಾಹುಲ್ ಹಮೀದ್ ಜೌಹರಿ ದುವಾ ನೆರವೇರಿಸಿದರು. ಎಸ್ ವೈ ಎಸ್ ಹಳೆಕೋಟೆ ಅಕ್ಕರೆಕೆರೆ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ರಿಫಾಯಿ ಮೌಲಿದ್ ಸಂಗಮಕ್ಕೆ ನೇತ್ರತ್ವ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷರಾದ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ಅನುಸ್ಮರಣಾ ಪ್ರಭಾಷಣಗೈದರು. ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದ ಅಮೀರಾಗಿ ಎಸ್ ವೈ ಎಸ್ ಹಳೆಕೋಟೆ ಅಕ್ಕರೆಕೆರೆ ಬ್ರಾಂಚ್ ಜೊತೆ ಕಾರ್ಯದರ್ಶಿ ಎಸ್ ಎಂ ಶರೀಫ್ ಹಾಗು ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖಾ ಪ್ರಧಾನ ಕಾರ್ಯದರ್ಶಿ ಆಸಿಫ್ ಕರ್ತವ್ಯ ನಿರ್ವಹಿಸಿದರು. ಅನುಸ್ಮರಣಾ ಪ್ರಯುಕ್ತ ಅರ್ಹ ಬಡ ಕುಟುಂಬಗಳಿಗೆ ರೇಷನ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಎಸ್ ವೈ ಎಸ್ ಹಳೆಕೋಟೆ ಅಕ್ಕರೆಕೆರೆ ಕೋಶಾಧಿಕಾರಿ ಅಬ್ದುರ‍್ರಹ್ಮಾನ್, ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖಾ ಕೋಶಾಧಿಕಾರಿ ಅಬ್ದುಲ್ ಮಜೀದ್, ಎಸ್ ವೈ ಎಸ್ ಉಪಾಧ್ಯಕ್ಷ ಖಾಲಿದ್ ಅಕ್ಕರೆಕೆರೆ, ಎಸ್ ವೈ ಎಸ್ ಜೊತೆ ಕಾರ್ಯದರ್ಶಿ ಅಶ್ರಫ್ ಗುಡ್ಡೆ,ಅಲ್ ಅಮೀನ್ ರಿಲೀಫ್ ಫೌಂಡೇಶನ್ ಚೆಯರ್‍ಮಾನ್ ಮನ್ಸೂರ್ ಹಳೆಕೋಟೆ, ಹಸನ್ ಹಾಜಿ ಅಕ್ಕರೆಕೆರೆ, ಯೂನುಸಾಕ ಅಕ್ಕರೆಕೆರೆ, ಬದ್ರುದ್ದೀನ್ ಪಟೇಲ್ ಕಂಪೌಂಡ್ ಹಾಗು ಎಸ್ಸೆಸ್ಸೆಫ್ ಮತ್ತು ಇಶ್ಕೇ ಮುಸ್ತಫ ಬುರ್ದಾ ಇಖ್ವಾನ್ ತಂಡ ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖಾಧ್ಯಕ್ಷ ಸಿರಾಜುದ್ದೀನ್ ಸ್ವಾಗತಿಸಿ ಮುಝಫ್ಫರ್ ಧನ್ಯವಾದಗೈದರು.
Comments