ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ಸೆಸ್ಸೆಫ್ ಅಕ್ಕರೆಕೆರೆ ಹಳೆಕೋಟೆ ಶಾಖೆಯ ವತಿಯಿಂದ ಗ್ರ್ಯಾಂಡ್ ಇಫ್ತಾರ್ ಕೂಟ ಹಾಗು ಮಹ್ಳರತುಲ್ ಬದ್ರಿಯ್ಯಃ ಮಜ್ಲಿಸ್ ಉಳ್ಳಾಲ ಅಕ್ಕರೆಕೆರೆಯ ಶಾಖಾ ಸಭಾ ಭವನ ಖುರ್ರತುಸ್ಸಾದಾತ್ ಸುನ್ನೀ ಸೆಂಟರಿನಲ್ಲಿ ನಡೆಯಿತು.
ಎಸ್ಸೆಸ್ಸೆಫ್ ಶಾಖಾ ನಿರ್ದೇಶಕರಾದ ಹಾಫಿಲ್ ಆಶಿಖ್ ಹಿಮಮಿ ಸಖಾಫಿ ಮಹ್ಳರತುಲ್ ಬದ್ರಿಯ್ಯಃ ಮಜ್ಲಿಸಿನ ನೇತ್ರತ್ವ ವಹಿಸಿದರು.
ಪ್ರಸ್ತುತ ಸಭೆಯಲ್ಲಿ ನಮ್ಮಿಂದ ಅಗಲಿದ ಸಂಘಟನಾ ಮಿತ್ರರು, ಊರಿನ ಮಹಣೀಯರ ಹೆಸರಿನಲ್ಲಿ ಕೆ ಎಂ ಜೆ ದಅವಾ ಕಾರ್ಯದರ್ಶಿ ಶಂಸುದ್ದೀನ್ ಮದನಿ ಉಸ್ತಾದ್ ದುಆ ನೆರವೇರಿಸಿದರು.
ಇಫ್ತಾರ್ ಕಾರ್ಯಕ್ರಮದಲ್ಲಿ ಕೆ ಎಂ ಜೆ, ಎಸ್ ವೈ ಎಸ್, ಎಸ್ಸೆಸ್ಸೆಫ್ ಅಕ್ಕರೆಕೆರೆ ಹಳೆಕೋಟೆ ಶಾಖೆಯ ನಾಯಕರು, ಸದಸ್ಯರು, ಹಿತೈಷಿಗಳು ಭಾಗವಹಿಸಿದರು.
Comments