ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ವತಿಯಿಂದ ಎಸ್ ವೈ ಎಸ್ ಸದಸ್ಯತ್ವದ ಐಡಿ ಕಾರ್ಡ್ ವಿತರಣೆ ಹಾಗು ಮಹ್ಳರತುಲ್ ಬದ್ರಿಯ್ಯಃ ಮಜ್ಲಿಸ್
ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ವತಿಯಿಂದ ಎಸ್ ವೈ ಎಸ್ ಸದಸ್ಯತ್ವದ ಐಡಿ ಕಾರ್ಡ್ ವಿತರಣೆ ಹಾಗು ಮಹ್ಳರತುಲ್ ಬದ್ರಿಯ್ಯಃ ಮಜ್ಲಿಸ್ ಬ್ರಾಂಚ್ ಅಧ್ಯಕ್ಷರಾದ ಅಬೂ ಮಫಾಝ್ ಮದನಿ ಹಳೆಕೋಟೆಯವರ ನೇತ್ರತ್ವದಲ್ಲಿ ಹಳೆಕೋಟೆಯ ಶಬೀರ್ ಪ್ಯಾಲೇಸಿನಲ್ಲಿ ಜರುಗಿತು.
ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸಾಕ್ ಪೇಟೆ ಕಾರ್ಯಕ್ರಮ ಉದ್ಘಾಟಿಸಿದರು. ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ಎಸ್ ವೈ ಎಸ್ ಸದಸ್ಯತ್ವ ಐಡಿ ಕಾರ್ಡಿನ ಕುರಿತು ಮಾಹಿತಿ ನೀಡಿದರು. ಸಂಘಟನೆಯ ಹಿರಿಯ ಸದಸ್ಯರುಗಳಾದ ಅಬ್ದುರ್ರಹ್ಮಾನ್ ಅಕ್ಕರೆಕೆರೆ ಹಾಗು ಯೂಸುಫ್ (ಯೂನುಸಾಕ) ಅಕ್ಕರೆಕೆರೆ ಯವರಿಗೆ ಸೆಂಟರ್ ಅಧ್ಯಕ್ಷರು ಐಡಿ ಹಸ್ತಾಂತರಿಸುವ ಮೂಲಕ ಐಡಿ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸುಂದರಭಾಗ್ ಬದ್ರಿಯಾ ಜುಮಾ ಮಸೀದಿ ಖತೀಬರಾದ ಶರೀಫ್ ಸಅದಿ ಮಂಜೇಶ್ವರ ತರಗತಿ ನಡೆಸಿ ದುವಾ ನಡೆಸಿದರು. ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಸೆಂಟರ್ ಕಾರ್ಯದರ್ಶಿ ಮನ್ಸೂರ್ ಹಳೆಕೋಟೆ, ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಖಾಲಿದ್ ಅಕ್ಕರೆಕೆರೆ ಹಾಗು ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚಿನ ಸದಸ್ಯರು ಮತ್ತು ಹಾಜರಿದ್ದರು. ಎಸ್ಸೆಸ್ಸೆಫ್ ಹಳೆಕೋಟೆ ಶಾಖಾ ನಾಯಕರಾದ ಹಮೀದ್ ಹಳೆಕೋಟೆ, ಹನೀಫ್ ಹಳೆಕೋಟೆ ಉಪಸ್ಥಿತರಿದ್ದರು.






Comments