ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧೀನದ ಆಝಾದ್ ನಗರ ಬ್ರಾಂಚ್ ಸದಸ್ಯತ್ವದ ಐಡಿ ಕಾರ್ಡ್ ವಿತರಣೆ.
ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧೀನದ ಆಝಾದ್ ನಗರ ಬ್ರಾಂಚ್ ಸದಸ್ಯರ ಸದಸ್ಯತ್ವದ ಐಡಿ ಕಾರ್ಡ್ ವಿತರಣಾ ಕಾರ್ಯಕ್ರಮ ಬ್ರಾಂಚ್ ಅಧ್ಯಕ್ಷರಾದ ಬಿ.ಜಿ ಹನೀಫ್ ಹಾಜಿ ಉಳ್ಳಾಲ ರವರ ಅಧ್ಯಕ್ಷತೆಯಲ್ಲಿ ಜರುಗಿತು.
ಉಳ್ಳಾಲ ಪುರಸಭಾ ಸ್ಥಳೀಯ ಕೌನ್ಸಿಲರ್ ಮುಹಮ್ಮದ್ ಅಶ್ರಫ್ ಕಾರ್ಯಕ್ರಮ ಉದ್ಘಾಟಿಸಿದರು. ಮಾಸ್ತಿಕಟ್ಟೆ ಜುಮಾ ಮಸೀದಿ ಅಧ್ಯಕ್ಷರಾದ ಮುಹಮ್ಮದ್ ಫ್ಯಾನ್ಸಿಗೆ ಐಡಿ ಕಾರ್ಡ್ ನೀಡುವ ಮೂಲಕ ಐಡಿ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಎಸ್ ವೈ ಎಸ್ ಸದಸ್ಯರುಗಳಾದ ಆಝಾದ್ ನಗರ ಬದ್ರಿಯ್ಯ ಫರ್ನೀಚರ್ ಮಾಲಕರಾದ ಮಯ್ಯದ್ದಿಯಾಕ, ಮುಸ್ತಫ ಹಾಗು ಶೌಕತ್ ಇಬ್ರಾಹಿಂ ಉಪಸ್ಥಿತರಿದ್ದರು. ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಆರ್ ಆರ್ ರಫೀಕ್ ಸ್ವಾಗತಿಸಿದರು.

Comments