Skip to main content

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಈ ಲಾಕ್ಡೌನ್ ಮತ್ತು ಪವಿತ್ರ ರಂಝಾನ್ ಸಂದರ್ಭ ಹಮ್ಮಿಕೊಂಡ ಸಾಂತ್ವನ ಚಟುವಟಿಕೆಗಳ ಕುರಿತು ಪುಟ್ಟ ಮಾಹಿತಿ.

ಅಸ್ಸಲಾಮು ಅಲೈಕುಂ ವರಹ್ಮತುಲ್ಲಾಹಿ ವಬರಕಾತುಹು.

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಈ ಲಾಕ್ಡೌನ್ ಮತ್ತು ಪವಿತ್ರ ರಂಝಾನ್ ಸಂದರ್ಭ ಹಮ್ಮಿಕೊಂಡ ಸಾಂತ್ವನ ಚಟುವಟಿಕೆಗಳ ಕುರಿತು ಪುಟ್ಟ ಮಾಹಿತಿ.

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧೀನದಲ್ಲಿ 13 ಬ್ರಾಂಚುಗಳು ಒಳಗೊಂಡಿದ್ದು, ಪ್ರತಿಯೊಂದು ಬ್ರಾಂಚುಗಳು ಕೂಡಾ ಸಕ್ರಿಯವಾಗಿ ಕಾರ್ಯಾಚರಿಸುತ್ತಿದೆ.
ಜಗತ್ತಿಗೆ ಮಾರಕವಾಗಿ ಬಾಧಿಸಿದ ಕೋರೋಣ ವೈರಸ್ ಭಾರತಕ್ಕೆ ಅಬ್ಬರಿಸಿದ ಪರಿಣಾಮ ಕೇಂದ್ರ ಹಾಗು ರಾಜ್ಯ ಸರ್ಕಾರ ಲಾಕ್ ಡೌನ್ ನಿಯಮ ಜಾರಿಗೆ ತಂದಿತು. ಈ ಮೂಲಕ ಜನರು ಸಂಕಷ್ಟಕ್ಕೆ ಒಳಗಾದರು. ಅದರಲ್ಲೂ ಬಡ ಹಾಗು ಮಧ್ಯಮ ವರ್ಗದ ಜನರು ತೀವ್ರ ಸಂಕಷ್ಟವನ್ನು ಅನುಭವಿಸುವಂತಾಯಿತು. ಇದನ್ನರಿತ ರಾಜ್ಯ ಎಸ್ ವೈ ಎಸ್ ಜನರ ಸಂಕಷ್ಟವನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯ ಪ್ರವ್ರತ್ತರಾದರು. ಇದರ ಅಧೀನದಲ್ಲಿ ಕಾರ್ಯಾಚರಿಸುವ ರಾಜ್ಯದ ಎಲ್ಲಾ ಜಿಲ್ಲೆ, ಸೆಂಟರ್ ಹಾಗು ಬ್ರಾಂಚಿಗಳಿಗೆ ಆದೇಶವನ್ನು ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಕರೆ ನೀಡಿದರು.
ರಾಜ್ಯದ ವಿವಿಧ ಭಾಗಗಳಲ್ಲಿ ಸುನ್ನೀ ಸಂಘಟನೆಗಳು ಕಾರ್ಯಾಚರಣೆಗೆ ಇಳಿದವು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ನಾಯಕರು, ಕಾರ್ಯಕಾರಿ ಸಮಿತಿ ಸದಸ್ಯರನ್ನೊಳಗೊಂಡ ತಂಡ ಜನರ ಸಮಸ್ಯೆಗಳಿಗೆ ಸಹಾಯಹಸ್ತ ಚಾಚುವ ನಿಟ್ಟಿನಲ್ಲಿ ತುರ್ತು ಆನ್ಲೈನ್ ಸಭೆ ನಡೆಸಿ ಲಾಕ್ ಡೌನ್ ಹಾಗು ರಂಝಾನ್ ಸಂದರ್ಭದಲ್ಲಿ ಜಾತಿ ಮತ ಭೇದ ಮರೆತು ಅರ್ಹ ಕುಟುಂಬಗಳಿಗೆ ರೇಷನ್ ಕಿಟ್ಟುಗಳ ವಿತರಣೆ, ಅರ್ಹ ಕುಟುಂಬ ಸದಸ್ಯರಿಗೆ ನಗದು ಸಹಾಯ ಹಸ್ತಾಂತರ, ಚಿಕಿತ್ಸಾ ನೆರವು ಇನ್ನಿತರ ಹಲವು ಪ್ರಶಂಸನೀಯವಾದ ಸಾಂತ್ವನ ಚಟುವಟಿಕೆಗಳನ್ನು ನಡೆಸಿತು. ಲಾಕ್ ಡೌನ್ ಘೋಷಣೆಯಾದ ವಾರದೊಳಗೆ 40 ಕುಟುಂಬಗಳಿಗೆ ರೇಷನ್ ವಿತರಿಸಿತು.
ಎರಡನೇ ಹಂತದಲ್ಲಿ 142 ಕುಟುಂಬಗಳಿಗೆ ರೇಷನ್ ಕಿಟ್ಟುಗಳನ್ನು ತಲುಪಿಸಲಾಯಿತು.  ಮೂರನೇ ಹಂತದಲ್ಲಿ ಉಳ್ಳಾಲ ಸುತ್ತಮುತ್ತ ಪರಿಸರದ 35 ಸಾದಾತ್ ಕುಟುಂಬಗಳ ಸಹಿತ 70 ಕುಟುಂಬಗಳಿಗೆ ರೇಷನ್ ವಿತರಿಸಲಾಯಿತು.
ಮುಕ್ಕಚ್ಚೇರಿ ಸುಭಾಷ್ ನಗರದ ದಿನೇಶ್,ಆಝಾದ್ ನಗರ ನಿವಾಸಿ ತಮಿಳು ನಾಡು ಮೂಲದ ಸತೀಶ್ ರಾಮಚಂದ್ರನ್ ಹಾಗು ಸೆಲ್ವೀ ಎಂಬ ಮಹಿಳೆ ಸಹಿತ ಉಳ್ಳಾಲ ಆಸುಪಾಸಿನ 250 ಕ್ಕೂ ಮಿಕ್ಕ ಕುಟುಂಬಗಳು ಜಾತಿ ಧರ್ಮಗಳ ಅಂತರವಿಲ್ಲದೆ ಇದರ ಪ್ರಯೋಜನವನ್ನು ಪಡೆದರು.
ಜಾತಿ, ಧರ್ಮ ವ್ಯತ್ಯಾಸವಿಲ್ಲದೆ 250 ಕ್ಕೂ ಮಿಕ್ಕ ಕುಟುಂಬಗಳಿಗೆ ರೇಷನ್ ಕಿಟ್ ತಲುಪಿಸುವ ಮೂಲಕ ಮಾದರೀ ಸೇವೆ ನೀಡಿದ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಉಳ್ಳಾಲ ವ್ಯಾಪ್ತಿಯ 83 ಅರ್ಹ ಕುಟುಂಬಗಳಿಗೆ ಎರಡು ಹಂತಗಳಲ್ಲಿ ನಗದು ಹಸ್ತಾಂತರ ಮತ್ತು ಕಿಡ್ನಿ ಹಾಗು ಬ್ರೈನ್ ಟ್ಯೂಮರ್ ರೋಗದಿಂದ ಬಳಲುತ್ತಿದ್ದ ಎರಡು ರೋಗಿಗಳ ಚಿಕಿತ್ಸೆಗೆ ಧನ ಸಹಾಯ ವಿತರಿಸಿ ಶ್ಲಾಘನೀಯ ಸಾಂತ್ವನ ಚಟುವಟಿಕೆ ನಡೆಸಿ ಎಲ್ಲರಿಗೂ ಮಾದರಿಯಾದರು.
ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ ಲಾಕ್ ಡೌನ್ ಹಾಗು ರಂಝಾನ್ ಸಮಯದಲ್ಲಿ ಎರಡು ಲಕ್ಷದ ಒಂಭತ್ತು ಸಾವಿರದ ಐನೂರು ರೂಪಾಯಿಗಳು ಮೌಲ್ಯದ ರೇಷನ್ ಕಿಟ್ಟುಗಳು, ತೊಂಭತ್ತಾರು ಸಾವಿರ ರೂಪಾಯಿಗಳ ನಗದು ಧನ ಸಹಾಯ ಮತ್ತು ಇಪ್ಪತ್ತಮೂರು ಸಾವಿರ ರೂಪಾಯಿಗಳ ಚಿಕಿತ್ಸಾ ನೆರವು ಅರ್ಹರಿಗೆ ವಿತರಿಸಿತು. ಒಟ್ಟು ಮೂರು ಲಕ್ಷದ ಇಪ್ಪತ್ತೆಂಟು ಸಾವಿರದ ಐನೂರು ರೂಪಾಯಿಗಳ ಸಾಂತ್ವನ ಚಟುವಟಿಕೆಗಳು ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ ನಡೆಸಲಾಯಿತು.
ಎಸ್ ವೈ ಎಸ್ ಉಳ್ಳಾಲ ಸೆಂಟರ್ ಇದರ ಸಾಂತ್ವನ ಚಟುವಟಿಕೆಗಳಿಗೆ ತನು, ಮನ, ಧನಗಳಿಂದ ಸಹಕರಿಸಿದ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಹಾಗು ಅಧೀನ ಬ್ರಾಂಚುಗಳ ನಾಯಕರು, ಸದಸ್ಯರು, ಹಿತೈಷಿಗಳು, ದಾನಿಗಳು, ಸರ್ವರಿಗೂ ಅಲ್ಲಾಹನು ದ್ವಿಲೋಕದಲ್ಲಿ ಅಭಿವ್ರದ್ಧಿ ಯಶಸ್ಸನ್ನು ನೀಡಲಿ. ಆಮೀನ್
ಮುಂದೆಯೂ ತಮ್ಮೆಲ್ಲರ ಸಹಾಯ ಸಹಕಾರ ನಿರೀಕ್ಷೆಯೊಂದಿಗೆ 
 
ಅಧ್ಯಕ್ಷರು ಮತ್ತು ಸರ್ವ ಸದಸ್ಯರು.
ಎಸ್ ವೈ ಎಸ್ ಉಳ್ಳಾಲ ಸೆಂಟರ್

✍️ ನವಾಝ್ ಸಖಾಫಿ ಉಳ್ಳಾಲ

Comments

Popular posts from this blog

ಎಸ್ ವೈ ಎಸ್ ಉಳ್ಳಾಲ ಮಂಚಿಲ ಸರ್ಕಲ್ ರಚನೆ

ಎಸ್ ವೈ ಎಸ್ ಉಳ್ಳಾಲ ಝೋನ್ ನೇತ್ರತ್ವದಲ್ಲಿ ಎಸ್ ವೈ ಎಸ್ ಮಂಚಿಲ ಸರ್ಕಲ್ ರಚನಾ ಸಭೆ ಉಳ್ಳಾಲ ಮಂಚಿಲದ ಮಂಬವುಲ್ ಉಲೂಂ ಮದ್ರಸ ಸಭಾ ಭವನದಲ್ಲಿ ನಡೆಯಿತು. ಮಂಚಿಲದ ಅಲ್ ಮಸ್ಜಿದುಲ್ ಮುನವ್ವರ್ ಖತೀಬರಾದ ಮುಹಮ್ಮದ್ ಮುದ್ರಿಕ ಮದನಿ ದುಆ ನೆರವೇರಿಸಿದರು. ಸರ್ಕಲ್ ರಚನೆಯ ವೀಡಿಯೋ ನೋಡಲು ನನ್ನನ್ನು ಮುಟ್ಟಿ ಝೋನ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ಸಭೆಯನ್ನು ಉದ್ಘಾಟಿಸಿ ಸಮಾಜದ, ಸಮುದಾಯದ ಸಬಲೀಕರಣ, ಸಾಂಘಿಕ ಶಕ್ತಿ ಮತ್ತು ನಾಯಕರುಗಳ ಸೃಷ್ಟಿಗೆ ಉಳ್ಳಾಲ ಝೋನ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಶಾಖೆಗಳನ್ನು ಸೇರಿಸಿ ಸರ್ಕಲ್ ಗಳನ್ನು ರಚಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.  ಪ್ರಸ್ತುತ ಸಭೆಯಲ್ಲಿ ಅಕ್ಕರೆಕೆರೆ, ಹಳೆಕೋಟೆ, ಮಂಚಿಲ ಮತ್ತು ಮಾರ್ಗತಲೆ ಶಾಖೆಗಳನ್ನು ಸೇರಿಸಿ ಮಂಚಿಲ ಸರ್ಕಲನ್ನು ರಚಿಸಿ ನೂತನ ಸಮಿತಿಯನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಶಮೀರ್ ಸಖಾಫಿ ಅಕ್ಕರೆಕೆರೆ, ಪ್ರಧಾನ ಕಾರ್ಯದರ್ಶಿಯಾಗಿ ಶರೀಫ್ ಮಾರ್ಗತಲೆ, ಕೋಶಾಧಿಕಾರಿಯಾಗಿ ಇರ್ಫಾನ್ ಮಂಚಿಲ, ಉಪಾಧ್ಯಕ್ಷರಾಗಿ ಮುಹಮ್ಮದ್ ಮದನಿ ಹಳೆಕೋಟೆ, ದಅವಾ ಕಾರ್ಯದರ್ಶಿಯಾಗಿ ಆರ್ ಕೆ ಮದನಿ ಅಕ್ಕರೆಕೆರೆ, ಇಸಾಬಃ ಕಾರ್ಯದರ್ಶಿಯಾಗಿ ಸಯೀದ್ ಮಂಚಿಲ, ಸಂಘಟನಾ ಕಾರ್ಯದರ್ಶಿಯಾಗಿ ಹಮೀದ್ ಹಳೆಕೋಟೆ  ಮತ್ತು ಮಾಧ್ಯಮ ವಕ್ತಾರರಾಗಿ ನವಾಝ್ ಸಖಾಫಿ ಉಳ್ಳಾಲ ಇವರನ್ನು ಆಯ್ಕೆ ಮಾಡಲಾಯಿತು. ...

ಕರ್ನಾಟಕ ಮುಸ್ಲಿಂ ಜಮಾಅತ್ ಕೆ ಎಂ ಜೆ ಮತ್ತು ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಶಾಖೆಯ ಆಶ್ರಯದಲ್ಲಿ ಗ್ರ್ಯಾಂಡ್ ಮೌಲಿದ್ ಮಜ್ಲಿಸ್

ಕರ್ನಾಟಕ ಮುಸ್ಲಿಂ ಜಮಾಅತ್ ಕೆ ಎಂ ಜೆ ಮತ್ತು ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಶಾಖೆಯ ಆಶ್ರಯದಲ್ಲಿ ಗ್ರ್ಯಾಂಡ್ ಮೌಲಿದ್ ಮಜ್ಲಿಸ್ ಉಳ್ಳಾಲದ ಅಕ್ಕರೆಕೆರೆಯ ಸಂಘಟನಾ ಕಛೇರಿ ಖುರ್ರತುಸ್ಸಾದಾತ್ ಸುನ್ನೀ ಸೆಂಟರಿನಲ್ಲಿ ನಡೆಯಿತು. ಈ ಸಭೆಯ ವೀಡಿಯೋ ನೋಡಲು ನನ್ನನ್ನು ಮುಟ್ಟಿ ಮೌಲಿದ್ ಮಜ್ಲಿಸಿನ ನೇತ್ರತ್ವವನ್ನು ಅಬೂ ಮಫಾಝ್ ಮದನಿ ವಹಿಸಿದರು. ಎಸ್ ವೈ ಎಸ್ ಶಾಖಾಧ್ಯಕ್ಷರಾದ ಅಶ್ರಫ್ ಝುಹ್ರಿ ಮಾತನಾಡಿ ವಾರಕ್ಕೊಮ್ಮೆ ಶುಕ್ರವಾರ ಸುಬಹ್ ನಮಾಝ್ ಬಳಿಕದ ಮಜ್ಲಿಸ್, ಮಾಸಿಕ ಮಹ್ಳರತುಲ್ ಬದ್ರಿಯ್ಯಃ ಮಜ್ಲಿಸ್ ಹಾಗು ಶಾಖೆಯ ಆಶ್ರಯದಲ್ಲಿ ನಡೆಯುವ ಇತರ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ರಬೇಕೆಂದು ತಿಳಿಸಿದರು. ನವಾಝ್ ಸಖಾಫಿ ಉಳ್ಳಾಲ ದುಆ ನೆರವೇರಿಸಿದರು. ಎಸ್ ವೈ ಎಸ್ ಶಾಖಾ ಕೋಶಾಧಿಕಾರಿ ಆರ್ ಕೆ ಮದನಿ  ಕಾರ್ಯಕ್ರಮ ನಿರ್ವಹಣೆ ಮಾಡಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಕೆ ಎಂ ಜೆ ಶಾಖಾಧ್ಯಕ್ಷರಾದ ಹಸನ್ ಹಾಜಿ ಉಳ್ಳಾಲ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಪಟೇಲ್ ಕಂಪೌಂಡ್ ಮತ್ತು ಶಾಖಾ ನಾಯಕರು, ಸದಸ್ಯರು, ಹಿತೈಷಿಗಳು ಭಾಗವಹಿಸಿದರು.

ಕೂರತ್ ತಂಙಳ್ ಪ್ರಥಮ ಉರೂಸ್ ಪ್ರಚಾರ ಸಭೆ ಹಾಗು ಅನುಸ್ಮರಣಾ ಕಾರ್ಯಕ್ರಮ

ಉಳ್ಳಾಲ : ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ಸೆಸ್ಸೆಫ್ ಅಕ್ಕರೆಕೆರೆ ಹಳೆಕೋಟೆ ಶಾಖೆಯ ವತಿಯಿಂದ ಖುರ್ರತುಸ್ಸಾದಾತ್ ಸಯ್ಯಿದ್ ಕೂರತ್ ತಂಙಳ್ ರವರ ಪ್ರಥಮ ಉರೂಸ್ ಪ್ರಚಾರ ಸಭೆ ಹಾಗು ಅನುಸ್ಮರಣಾ ಕಾರ್ಯಕ್ರಮ ಉಳ್ಳಾಲ ಅಕ್ಕರೆಕೆರೆಯ ಖುರ್ರತುಸ್ಸಾದಾತ್ ಸುನ್ನೀ ಸೆಂಟರಿನಲ್ಲಿ ನಡೆಯಿತು.  ಕಾರ್ಯಕ್ರಮದ ವೀಡಿಯೋ ನೋಡಲು ನನ್ನನ್ನು ಮುಟ್ಟಿ ಕೆ ಎಂ ಜೆ ಅಧ್ಯಕ್ಷರಾದ ಹಸನ್ ಹಾಜಿ ಉಳ್ಳಾಲ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಕೋಟೆಕಾರ್ ಜುಮಾ ಮಸ್ಜಿದ್ ಮುದರ್ರಿಸ್ ಅಬ್ದುರ್ರಝ್ಝಾಖ್ ಸಅದಿ ಮದಕ ಅನುಸ್ಮರಣಾ ಭಾಷಣ ಮಾಡಿದರು. ಎಸ್ ವೈ ಎಸ್ ಉಳ್ಳಾಲ ಝೋನ್ ನಾಯಕ ಸಯ್ಯಿದ್ ಖುಬೈಬ್ ತಂಙಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಸೂರಃ ಯಾಸೀನ್ ಪಾರಾಯಣ, ತಹ್ಲೀಲ್ ಸಮರ್ಪಣೆ ನಡೆಸಲಾಯಿತು. ಎಸ್ಸೆಸ್ಸೆಫ್ ನಾಯಕ ಆಶಿಖ್ ಹಿಮಮಿ ಸಖಾಫಿ ನಶೀದಃ ಹಾಡಿದರು. ಝೋನ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ, ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಹ್ಮದ್ ಹಳೆಕೋಟೆ, ಕೋಶಾಧಿಕಾರಿ ಶರೀಫ್ ಮಂಚಿಲ, ಝೋನ್ ನಾಯಕರಾದ ಇಸಾಖ್ ಪೇಟೆ, ಎಸ್ ವೈ ಎಸ್ ಶಾಖಾಧ್ಯಕ್ಷರಾದ ಅಶ್ರಫ್ ಝುಹ್ರಿ ಅಕ್ಕರೆಕೆರೆ, ಕೋಶಾಧಿಕಾರಿ ಆರ್ ಕೆ ಮದನಿ, ಕೆ ಎಂ ಜೆ  ಕೋಶಾಧಿಕಾರಿ ಅಬ್ದುಲ್ ರಹ್ಮಾನ್ ಅಕ್ಕರೆಕರೆ, ಮುಹಮ್ಮದ್ ಮದನಿ ಹಳೆಕೋಟೆ ಸಹಿತ ಸಂಘಟನಾ ನಾಯಕರು, ಸದಸ್ಯರು, ಹಿತೈಷಿಗಳು ಭಾಗವಹಿಸಿದರು. ...