ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಾಳೆಗೊಂದು ನೆರಳು ಎಂಬ ಧ್ಯೇಯ ವಾಕ್ಯದೊಂದಿಗೆ ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ ಸಸಿ ನೆಡಲಾಯಿತು.
ಎಸ್ ವೈ ಎಸ್ ರಾಜ್ಯ ಸದಸ್ಯರೂ, SYS ಉಳ್ಳಾಲ ಸೆಂಟರ್ ನಾಯಕರೂ ಆದ ಬಿ.ಜಿ ಹನೀಫ್ ಹಾಜಿ ಉಳ್ಳಾಲ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು. ನೆಡಲ್ಪಟ್ಟ ಗಿಡ ಮುಂದೆ ಮರವಾಗಿ ಮನುಷ್ಯ,ಪ್ರಾಣಿ ಪಕ್ಷಿಗಳು,ಹಕ್ಕಿಗಳು,ಜಂತುಗಳು ಹೀಗೆ ಯಾರೆಲ್ಲಾ ಪ್ರಯೋಜನ ಪಡೆಯುತ್ತಿರುತ್ತಾರೋ ಆವಾಗಲೆಲ್ಲಾ ಗಿಡ ನೆಟ್ಟು ಪೋಷಿಸಿ ಬೆಳೆಸಿದವನಿಗೆ ಪ್ರತಿಫಲ ಲಭಿಸುತ್ತಲೇ ಇರುತ್ತದೆ ಎಂದು ಪ್ರವಾದಿ (ಸ.ಅ) ಹೇಳಿರುವರು. ಗಿಡ ನೆಟ್ಟು ಬೆಳೆಸುವುದನ್ನು ಇಸ್ಲಾಂ ಪ್ರೋತ್ಸಾಹಿಸುತ್ತದೆ ಮಾತ್ರವಲ್ಲ ಅಪಾರ ಪುಣ್ಯ ಲಭಿಸುವ ಒಂದು ಕೆಲಸವಾಗಿದೆ ಎಂದು ಈಮೇಲಿನ ಹದೀಸ್ ಮೂಲಕ ತಿಳಿಯಬಹುದು ಎಂದು ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ತಿಳಿಸಿದರು.
ಕಾರ್ಯಕ್ರಮದಲ್ಲಿ ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸಾಕ್ ಪೇಟೆ, ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಉಪಾಧ್ಯಕ್ಷರಾದ ಅಬ್ದುಲ್ ರಹ್ಮಾನ್ ಅಕ್ಕರೆಕೆರೆ, ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ, ಸೆಂಟರ್ ಕಾರ್ಯಕಾರಿ ಸಮಿತಿ ಸದಸ್ಯ ಸತ್ತಾರ್ ಮೇಲಂಗಡಿ, ಸೆಂಟರ್ ಕಾರ್ಯಕ್ರಮ ನಿರ್ವಹಣಾ ಕಾರ್ಯದರ್ಶಿ ಇಲ್ಯಾಸ್ ಕೈಕೋ ಗಿಡ ನೆಡುವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
✍ ನವಾಝ್ ಸಖಾಫಿ ಅಕ್ಕರೆಕೆರೆ ಉಳ್ಳಾಲ


Comments