Skip to main content

ಅಲ್ತಾಫ್ ಕುಂಪಲ ಇವರನ್ನು ಉಳ್ಳಾಲ ಕೋಡಿ ದೋಟದ ಅಲ್ ಮಸ್ಜಿದುಲ್ ಮಾಲಿಕ್ ಮತ್ತು ಇಶಾಅತುಸ್ಸುನ್ನಃ ಮದ್ರಸ ಆಡಳಿತ ಸಮಿತಿ ವತಿಯಿಂದ ಸನ್ಮಾನ

ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯರಾಗಿ ಆಯ್ಕೆಯಾದ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಾಂತ್ವನ ವಿಭಾಗದ ಚೇರಮಾನ್ ಅಲ್ತಾಫ್ ಕುಂಪಲ ಇವರನ್ನು ಉಳ್ಳಾಲ ಕೋಡಿ ದೋಟದ ಅಲ್ ಮಸ್ಜಿದುಲ್ ಮಾಲಿಕ್ ಮತ್ತು ಇಶಾಅತುಸ್ಸುನ್ನಃ ಮದ್ರಸ ಆಡಳಿತ ಸಮಿತಿ ವತಿಯಿಂದ ದೋಟ ಮದ್ರಸದ ಮಕ್ಕಳ ಪ್ರತಿಭಾ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ ಎಸ್ ಎಂ ಓ ಇದರ ಗೌರವಾಧ್ಯಕ್ಷರೂ ಉಳ್ಳಾಲ ದರ್ಗಾ ಮಾಜಿ ಅಧ್ಯಕ್ಷರೂ ಆದ ಯು ಎಸ್ ಹಂಝ ಹಾಜಿ ಉಳ್ಳಾಲ, ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ ಎಸ್ ಎಂ ಓ ಇದರ ಅಧ್ಯಕ್ಷರಾದ ಬಹು ಪಿ ಎಸ್ ಎಂ ಶಿಹಾಬುದ್ದೀನ್ ಸಖಾಫಿ ಉಳ್ಳಾಲ, ದೋಟ ಮಸೀದಿ, ಮದ್ರಸ ಅಧ್ಯಕ್ಷರಾದ ಇಬ್ರಾಹಿಂ, ಕೋಡಿ, ದೋಟದ ಹಿರಿಯ ನಾಯಕರಾದ ಮಹ್ಮೂದ್ ಹಾಜಿ ಹಾಗು ಇತರರು ಉಪಸ್ಥಿತರಿದ್ದರು.

Comments