ಎಸ್ ವೈ ಎಸ್ ಉಳ್ಳಾಲ ಸೆಂಟರ್ ಆಶ್ರಯದಲ್ಲಿ ಮಾದರಿ ಮೌಲಿದ್ ಮಜ್ಲಿಸ್ ಮತ್ತು ಸನ್ಮಾನ ಸಮಾರಂಭ ಉಳ್ಳಾಲ ಮೇಲಂಗಡಿಯ ತಾಜುಲ್ ಉಲಮಾ ಸುನ್ನೀ ಸೆಂಟರ್ ನಲ್ಲಿ ನಡೆಯಿತು.
ಸಹಿಷ್ಣುತೆಯ ಪ್ರವಾದಿ ಸ.ಅ ಎಂಬ ಘೋಷ ವಾಕ್ಯದೊಂದಿಗೆ ಮೆಹ್ಫಿಲೇ ಮುಸ್ತಫ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ಮಾದರಿ ಮೌಲಿದ್ ಮಜ್ಲಿಸಿನ ನೇತ್ರತ್ವವನ್ನು ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಳ್ ವಹಿಸಿ ದುವಾ ನೆರವೇರಿಸಿದರು. ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ SMO ಉಳ್ಳಾಲ ಇದರ ಅಧ್ಯಕ್ಷರಾದ ಪಿ ಎಸ್ ಎಂ ಶಿಹಾಬುದ್ದೀನ್ ಸಖಾಫಿ ಸಹಿಷ್ಣುತೆಯ ಪ್ರವಾದಿ ಎಂಬ ವಿಷಯದಲ್ಲಿ ಸಂದೇಶ ಭಾಷಣ ಮಾಡಿದರು. ಬಳಿಕ ಎಸ್ ವೈ ಎಸ್ ದ.ಕ ಜಿಲ್ಲಾ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಅಶ್ರಫ್ ಕಿನಾರ, ಎಸ್ ವೈ ಎಸ್ ದ.ಕ ಜಿಲ್ಲಾ ನೂತನ ಕೋಶಾಧಿಕಾರಿಯಾಗಿ ಆಯ್ಕೆಯಾದ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿಯಾದ ಬಿ ಜಿ ಹನೀಫ್ ಹಾಜಿ, ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಇದರ ನೂತನ ಸದಸ್ಯರಾಗಿ ಆಯ್ಕೆಯಾದ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಾಂತ್ವನ ವಿಭಾಗದ ಚೆಯರಮಾನ್ ಅಲ್ತಾಫ್ ಕುಂಪಲ, ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ ಉಳ್ಳಾಲ ಇದರ ಅಧ್ತಕ್ಷರಾಗಿರುವ ಪಿ ಎಸ್ ಎಂ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ಹಾಗು ದ.ಕ ಜಿಲ್ಲಾ ಎಸ್ಸೆಸ್ಸೆಫ್ ಸದಸ್ಯರಾಗಿ ಆಯ್ಕೆಯಾದ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್ ಇವರಿಗೆ ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಳ್, ಸೆಂಟರ್ ಉಪಾಧ್ಯಕ್ಷರಾದ ತ್ವಾಹಿರ್ ಹಾಜಿ, ಸಯ್ಯಿದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿ ಉಳ್ಳಾಲ ಇದರ ಮಾಜಿ ಅಧ್ಯಕ್ಷರಾದ ಕರೀಂ ಹಾಜಿ ಮೇಲಂಗಡಿ ಸನ್ಮಾನಿಸಿದರು. ಅಶ್ರಫ್ ಕಿನಾರ ಹಾಗು ಬಿ ಜಿ ಹನೀಫ್ ಹಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಬಡ ರೋಗಿಯ ಚಿಕಿತ್ಸಾ ವೆಚ್ಚಕ್ಕಾಗಿ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಾಂತ್ವನ ವಿಭಾಗದ ವತಿಯಿಂದ ಧನ ಸಹಾಯ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಎಸ್ ವೈ ಎಸ್ ಮೇಲಂಗಡಿ ಬ್ರಾಂಚ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ, ಸಾದಾತ್ ಫಂಡ್ ಅಸೊಸಿಯೇಶನ್ ಉಳ್ಳಾಲ ಇದರ ಕನ್ವೀನರ್ ಸಯ್ಯಿದ್ ಜವಾದ್ ತಂಗಳ್, ಸುನ್ನೀ ಜಂಇಯ್ಯತುಲ್ ಉಲಮಾ ತಲಪಾಡಿ ಝೋನ್ ಇದರ ಸಮಿತಿ ಸದಸ್ಯರಾದ ಕಬೀರ್ ಸಅದಿ ಉಳ್ಳಾಲ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ರೈಟ್ ಟೀಮ್ ಮುಖ್ಯಸ್ಥ ಹಾಫಿಝ್ ಉವೈಸ್ ಕೋಟೆಪುರ, ಹಾಫಿಝ್ ಮುಕಮ್ಮಿಲ್ ಮೇಲಂಗಡಿ, ಎಸ್ ವೈ ಎಸ್ ಮೇಲಂಗಡಿ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಕಾದರ್ ರಿಕ್ಷಾ, ಸೆಂಟರ್ ಸಮಿತಿ ಸದಸ್ಯರಾದ ಸತ್ತಾರ್ ಮೇಲಂಗಡಿ ಉಪಸ್ಥಿತರಿದ್ದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಎಸ್ ವೈ ಎಸ್ ಉಳ್ಳಾಲ ಝೋನ್ ನೇತ್ರತ್ವದಲ್ಲಿ ಎಸ್ ವೈ ಎಸ್ ಮಂಚಿಲ ಸರ್ಕಲ್ ರಚನಾ ಸಭೆ ಉಳ್ಳಾಲ ಮಂಚಿಲದ ಮಂಬವುಲ್ ಉಲೂಂ ಮದ್ರಸ ಸಭಾ ಭವನದಲ್ಲಿ ನಡೆಯಿತು. ಮಂಚಿಲದ ಅಲ್ ಮಸ್ಜಿದುಲ್ ಮುನವ್ವರ್ ಖತೀಬರಾದ ಮುಹಮ್ಮದ್ ಮುದ್ರಿಕ ಮದನಿ ದುಆ ನೆರವೇರಿಸಿದರು. ಸರ್ಕಲ್ ರಚನೆಯ ವೀಡಿಯೋ ನೋಡಲು ನನ್ನನ್ನು ಮುಟ್ಟಿ ಝೋನ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ಸಭೆಯನ್ನು ಉದ್ಘಾಟಿಸಿ ಸಮಾಜದ, ಸಮುದಾಯದ ಸಬಲೀಕರಣ, ಸಾಂಘಿಕ ಶಕ್ತಿ ಮತ್ತು ನಾಯಕರುಗಳ ಸೃಷ್ಟಿಗೆ ಉಳ್ಳಾಲ ಝೋನ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಶಾಖೆಗಳನ್ನು ಸೇರಿಸಿ ಸರ್ಕಲ್ ಗಳನ್ನು ರಚಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು. ಪ್ರಸ್ತುತ ಸಭೆಯಲ್ಲಿ ಅಕ್ಕರೆಕೆರೆ, ಹಳೆಕೋಟೆ, ಮಂಚಿಲ ಮತ್ತು ಮಾರ್ಗತಲೆ ಶಾಖೆಗಳನ್ನು ಸೇರಿಸಿ ಮಂಚಿಲ ಸರ್ಕಲನ್ನು ರಚಿಸಿ ನೂತನ ಸಮಿತಿಯನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಶಮೀರ್ ಸಖಾಫಿ ಅಕ್ಕರೆಕೆರೆ, ಪ್ರಧಾನ ಕಾರ್ಯದರ್ಶಿಯಾಗಿ ಶರೀಫ್ ಮಾರ್ಗತಲೆ, ಕೋಶಾಧಿಕಾರಿಯಾಗಿ ಇರ್ಫಾನ್ ಮಂಚಿಲ, ಉಪಾಧ್ಯಕ್ಷರಾಗಿ ಮುಹಮ್ಮದ್ ಮದನಿ ಹಳೆಕೋಟೆ, ದಅವಾ ಕಾರ್ಯದರ್ಶಿಯಾಗಿ ಆರ್ ಕೆ ಮದನಿ ಅಕ್ಕರೆಕೆರೆ, ಇಸಾಬಃ ಕಾರ್ಯದರ್ಶಿಯಾಗಿ ಸಯೀದ್ ಮಂಚಿಲ, ಸಂಘಟನಾ ಕಾರ್ಯದರ್ಶಿಯಾಗಿ ಹಮೀದ್ ಹಳೆಕೋಟೆ ಮತ್ತು ಮಾಧ್ಯಮ ವಕ್ತಾರರಾಗಿ ನವಾಝ್ ಸಖಾಫಿ ಉಳ್ಳಾಲ ಇವರನ್ನು ಆಯ್ಕೆ ಮಾಡಲಾಯಿತು. ...
Comments