ವಿಟ್ಲದಲ್ಲಿರುವ ಕುಟುಂಬವೊಂದರ ಏಕೈಕ ಆಧಾರ ಸ್ತಂಭವಾಗಿದ್ದ ಮನೆಯ ಯಜಮಾನ ಮರಣ ಹೊಂದಿದಾಗ ಕುಟುಂಬದ ಮುಂದಿನ ಜೀವನಾಧಾರಕ್ಕೆ ದಿಕ್ಕು ತೋಚದಿದ್ದಾಗ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಾಂತ್ವನ ಸಮಿತಿಯು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿತು.
ಅಗಲಿದ ವ್ಯಕ್ತಿಗೆ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಳ್ ರವರ ನೇತ್ರತ್ವದಲ್ಲಿ ತಹ್ಲೀಲ್ ಸಮರ್ಪಿಸಿ ದುಆ ನಡೆಸಲಾಯಿತು.
ತಾಯಿ ಮತ್ತು ಮೂರು ಹೆಣ್ಣು ಮಕ್ಕಳ ಹೊಣೆಯು ಉಳ್ಳಾಲ ದಅವಾ ಕಾಲೇಜ್ ನಲ್ಲಿ ಅಂತಿಮ ಪದವಿ ಕಲಿಯುತ್ತಿರುವ ಏಕೈಕ ಪುತ್ರ ನ ಮೇಲಿದ್ದು ಶಿಕ್ಷಣ ಮುಂದುವರಿಕೆ ಕುರಿತು ಚಿಂತಾಮಗ್ನರಾಗಿದ್ದ ಸಂದರ್ಭ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಾಂತ್ವನ ವಿಭಾಗ ಮಗನ ಶಿಕ್ಷಣ ಪೂರ್ತೀಕರಿಸುವಂತೆಯೂ ಆ ತನಕ ಮನೆಗೆ ಅಗತ್ಯ ರೇಷನ್ ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ ಮಾಸಂಪ್ರತಿ ನೀಡುವುದಾಗಿ ತಿಳಿಸಲಾಯಿತು.
ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಾಂತ್ವನ ವಿಭಾಗ ಚೇರಮಾನ್ ಅಲ್ತಾಫ್ ಕುಂಪಲರವರ ನೇತ್ರತ್ವದಲ್ಲಿ ಪ್ರಥಮ ತಿಂಗಳ ರೇಷನ್ ವಿತರಿಸಲಾಯಿತು.
ಈ ಸಂದರ್ಭ ಎಸ್ ವೈ ಎಸ್ ಜಿಲ್ಲಾ ಕೋಶಾಧಿಕಾರಿ ಹನೀಫ್ ಹಾಜಿ ಉಳ್ಳಾಲ, ಸೆಂಟರ್ ಸಂಚಾಲಕ ಮುಹಮ್ಮದ್ ಅಶ್ರಫ್ ಹಾಜಿ, ಸೆಂಟರ್ ಕೋಶಾಧಿಕಾರಿ ಇಸ್ಹಾಕ್ ಬಸ್ತಿಪಡ್ಪು, ಉಮರ್ ಫಾರೂಕ್ ಬೊಟ್ಟು, ಮುಸ್ತಪ ಮಾಸ್ಟರ್ ಮುಕಚ್ಚೇರಿ, ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು, ಮುಸ್ತಪ ವಿಟ್ಲ ಮುಂತಾದವರು ಉಪಸ್ಥಿತರಿದ್ದರು.
ಎಸ್ ವೈ ಎಸ್ ಉಳ್ಳಾಲ ಝೋನ್ ನೇತ್ರತ್ವದಲ್ಲಿ ಎಸ್ ವೈ ಎಸ್ ಮಂಚಿಲ ಸರ್ಕಲ್ ರಚನಾ ಸಭೆ ಉಳ್ಳಾಲ ಮಂಚಿಲದ ಮಂಬವುಲ್ ಉಲೂಂ ಮದ್ರಸ ಸಭಾ ಭವನದಲ್ಲಿ ನಡೆಯಿತು. ಮಂಚಿಲದ ಅಲ್ ಮಸ್ಜಿದುಲ್ ಮುನವ್ವರ್ ಖತೀಬರಾದ ಮುಹಮ್ಮದ್ ಮುದ್ರಿಕ ಮದನಿ ದುಆ ನೆರವೇರಿಸಿದರು. ಸರ್ಕಲ್ ರಚನೆಯ ವೀಡಿಯೋ ನೋಡಲು ನನ್ನನ್ನು ಮುಟ್ಟಿ ಝೋನ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ಸಭೆಯನ್ನು ಉದ್ಘಾಟಿಸಿ ಸಮಾಜದ, ಸಮುದಾಯದ ಸಬಲೀಕರಣ, ಸಾಂಘಿಕ ಶಕ್ತಿ ಮತ್ತು ನಾಯಕರುಗಳ ಸೃಷ್ಟಿಗೆ ಉಳ್ಳಾಲ ಝೋನ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಶಾಖೆಗಳನ್ನು ಸೇರಿಸಿ ಸರ್ಕಲ್ ಗಳನ್ನು ರಚಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು. ಪ್ರಸ್ತುತ ಸಭೆಯಲ್ಲಿ ಅಕ್ಕರೆಕೆರೆ, ಹಳೆಕೋಟೆ, ಮಂಚಿಲ ಮತ್ತು ಮಾರ್ಗತಲೆ ಶಾಖೆಗಳನ್ನು ಸೇರಿಸಿ ಮಂಚಿಲ ಸರ್ಕಲನ್ನು ರಚಿಸಿ ನೂತನ ಸಮಿತಿಯನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಶಮೀರ್ ಸಖಾಫಿ ಅಕ್ಕರೆಕೆರೆ, ಪ್ರಧಾನ ಕಾರ್ಯದರ್ಶಿಯಾಗಿ ಶರೀಫ್ ಮಾರ್ಗತಲೆ, ಕೋಶಾಧಿಕಾರಿಯಾಗಿ ಇರ್ಫಾನ್ ಮಂಚಿಲ, ಉಪಾಧ್ಯಕ್ಷರಾಗಿ ಮುಹಮ್ಮದ್ ಮದನಿ ಹಳೆಕೋಟೆ, ದಅವಾ ಕಾರ್ಯದರ್ಶಿಯಾಗಿ ಆರ್ ಕೆ ಮದನಿ ಅಕ್ಕರೆಕೆರೆ, ಇಸಾಬಃ ಕಾರ್ಯದರ್ಶಿಯಾಗಿ ಸಯೀದ್ ಮಂಚಿಲ, ಸಂಘಟನಾ ಕಾರ್ಯದರ್ಶಿಯಾಗಿ ಹಮೀದ್ ಹಳೆಕೋಟೆ ಮತ್ತು ಮಾಧ್ಯಮ ವಕ್ತಾರರಾಗಿ ನವಾಝ್ ಸಖಾಫಿ ಉಳ್ಳಾಲ ಇವರನ್ನು ಆಯ್ಕೆ ಮಾಡಲಾಯಿತು. ...
Comments