--------------------------------------------------
ಸಾಮಾಜಿಕ ನ್ಯಾಯ, ಜಾತ್ಯಾತೀತ ನಿಲುವನ್ನು ಹೊಂದಿರುವ ವಾರ್ತಾಭಾರತಿ ಪತ್ರಿಕೆಯ ವರದಿಗಾರನ ಬಂಧನ ನಿಜಕ್ಕೂ ಖೇದಕರ ಮತ್ತು ಆತಂಕಕಾರಿ ಬೆಳವಣಿಗೆಯಾಗಿದೆ. ಮಾಧ್ಯಮಗಳಲ್ಲಿ ಅತ್ಯಂತ ಜನಪ್ರಿಯ ಮಾಧ್ಯಮವಾಗಿ ಪತ್ರಿಕಾ ಮಾಧ್ಯಮ ಗುರುತಿಸಲ್ಪಟ್ಟಿದೆ. ಒಂದು ಘಟನೆಯ ಹಿನ್ನೆಲೆ ಅದರ ಕುರಿತು ಆರೋಪಿಸಿದವರನ್ನು ಮತ್ತು ಆರೋಪಿಸಲ್ಪಟ್ಟವರನ್ನೂ ಪರಿಗಣಿಸಿ ಪತ್ರಿಕೆಯಲ್ಲಿ ವಸ್ತುನಿಷ್ಠ ಸುದ್ದಿಗಳನ್ನು ಪ್ರಕಟಿಸಲಾಗುತ್ತದೆ. ಅದನ್ನೇ ವಾರ್ತಾಭಾರತಿ ಪತ್ರಿಕೆ ನಿರ್ವಹಿಸಿದೆ. ವಾರ್ತಾಭಾರತಿಯಲ್ಲಿ ಬಂದ ಒಂದು ವರದಿಯನ್ನು ಆಧರಿಸಿ ಆ ವರದಿಯನ್ನು ವರದಿ ಮಾಡಿದ ಮಾಧ್ಯಮ ಪ್ರತಿನಿಧಿಯನ್ನು ಪೋಲೀಸರು ಬಂಧಿಸಿರುವುದು ಅತಿರೇಕ ಮತ್ತು ಸರ್ವಾಧಿಕಾರಿಯ ಧೋರಣೆಯಾಗಿದೆ.
ರಾಜ್ಯ ಸರ್ಕಾರ, ಗ್ರಹ ಸಚಿವರು ಇದರ ಬಗ್ಗೆ ಗಮನಹರಿಸಿ ವಾರ್ತಾಭಾರತಿ ವರದಿಗಾರನ ವಿರುದ್ಧ ಇರುವ ಸುಳ್ಳು ಮೊಕದ್ದಮೆಯನ್ನು ಕೈ ಬಿಡಬೇಕು ಎಂದು SYS ಉಳ್ಳಾಲ ಸೆಂಟರ್ ಒತ್ತಾಯಿಸಿದೆ.
Comments