*ಗೌರಿ ಲಂಕೇಶ್ ಹತ್ಯೆಗೆ SYS ಉಳ್ಳಾಲ ಸೆಂಟರ್ ಖಂಡನೆ* -------------------------------------------------------
ಖ್ಯಾತ ಚಿಂತಕಿ, ಸಾಹಿತಿ, ಮಾನವ ಹಕ್ಕು ಹೋರಾಟಗಾರ್ತಿ, ಶೋಷಿತರ, ದಮನಿತರ, ದಲಿತರ, ಅಲ್ಪ ಸಂಖ್ಯಾತರ ಹಕ್ಕು, ನ್ಯಾಯಕ್ಕಾಗಿ ತನ್ನ ಹರಿತವಾದ ಲೇಖನಿಯ ಮೂಲಕ ಹೋರಾಡುತ್ತಿದ್ದ ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ರವರ ಹತ್ಯೆ ಖಂಡನೀಯವಾದುದಾಗಿದೆ.
ಫ್ಯಾಶಿಸಂ ವಿರುದ್ಧ ಮಾತು, ಕ್ರತಿ ಗಳ ಮೂಲಕ ಹೋರಾಡುವವರ ಕೊಲೆ ನ್ಯಾಯ ವ್ಯವಸ್ಥೆಯನ್ನೇ ಅಣಕಿಸುವಂತಿದೆ. ಯಾವುದೇ ಒತ್ತಡಗಳಿಗೆ ಮಣಿಯದೆ ರಾಜ್ಯ ಸರ್ಕಾರವು ಗೌರಿ ಲಂಕೇಶ್ ರವರ ಕೊಲೆ ಆರೋಪಿಗಳನ್ನು ಬಂಧಿಸಿ ಕೊಲೆಯ ಹಿಂದಿರುವ ಸಮಾಜಘಾತುಕ ಶಕ್ತಿಗಳನ್ನು ಮಟ್ಟಹಾಕಬೇಕೆಂದು ಮನವಿ ಮಾಡುತ್ತಿದೆ.
Comments