Skip to main content

ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ಪಾಂಚ್ ವತಿಯಿಂದ ಬ್ರಹತ್ ಮೌಲಿದ್ ಮಜ್ಲಿಸ್ ಕಾರ್ಯಕ್ರಮ

ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ಪಾಂಚ್ ವತಿಯಿಂದ ಬ್ರಹತ್ ಮೌಲಿದ್ ಮಜ್ಲಿಸ್ ಕಾರ್ಯಕ್ರಮ ನವೆಂಬರ್ 4 ರಂದು ಬ್ರಾಂಚ್ ಅಧ್ಯಕ್ಷರ ನಿವಾಸದಲ್ಲಿ ನಡೆಯಿತು.

ಮಜ್ಲಿಸಿನಲ್ಲಿ ಬ್ರಾಂಚಿನ ನಾಯಕರು, ಸದಸ್ಯರು ಭಾಗವಹಿಸಿದರು. ಪ್ರವಾದಿ ಪ್ರೇಮದ ಕುರಿತು ತೋಟ ಮಸೀದಿ ಇಮಾಮರಾದ ಯೂನುಸ್ ಇಮ್ದಾದಿ ಅಲ್ ಫುರ್ಖಾನೀ ತರಗತಿ ನಡೆಸಿದರು. 

ಬ್ರಾಂಚಿನ ವತಿಯಿಂದ ನಡೆದ ಮೌಲಿದ್ ಕಾರ್ಯಕ್ರಮದ ಪೂರ್ವಭಾವಿಯಾಗಿ ಎಸ್ ವೈ ಎಸ್ ಕಾರ್ಯಕರ್ತರ ಮನೆ ಮನೆಗಳಲ್ಲಿ ಮೌಲಿದ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದರಂತೆ ಅಕ್ಟೋಬರ್ 24 ರಿಂದ ನವೆಂಬರ್ 03 ರ ವರೆಗೆ ಎಸ್ ವೈ ಎಸ್ ಸದಸ್ಯರ ಮನೆಗಳಲ್ಲಿ ಮೌಲೂದ್ ಮಜ್ಲಿಸ್ ನಡೆಯಿತು.











































 

Comments