ಲಾಕ್ ಡೌನ್ ಹಾಗು ಇತರ ಕಾರಣಗಳಿಂದ ಸಂಕಷ್ಟ ಅನುಭವಿಸುತ್ತಿರುವ ಮೊಹಲ್ಲಾದ ಉಸ್ತಾದರುಗಳನ್ನು ಗುರುತಿಸಿ ಅವರಿಗೆ ಆರ್ಥಿಕ ಸಹಾಯ ನೀಡಿ, ಆ ಮೂಲಕ ಅವರ ಕಷ್ಟಗಳನ್ನು ನಿವಾರಿಸಲು ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮುಅಲ್ಲಿಂ ಫಂಡ್ ಸಂಗ್ರಹ ಯೋಜನೆ ಹಮ್ಮಿಕೊಂಡು, ಅಧೀನ ಬ್ರಾಂಚುಗಳ ಮೂಲಕ ಫಂಡ್ ಸಂಗ್ರಹಿಸಲಾಗಿತ್ತು.
ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ಪ್ರಸ್ತುತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸಮುದಾಯದಲ್ಲಿ ಅತ್ಯಂತ ಪ್ರಭಾವಿಗಳು ಮತ್ತು ಗೌರವಯುತ ಸ್ಥಾನದಲ್ಲಿರುವವರು ಮುಅಲ್ಲಿಮರಾಗಿದ್ದಾರೆ. ಅವರ ಕಷ್ಟಕ್ಕೆ ಸ್ಪಂದಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಎಸ್ ವೈ ಎಸ್ ರಾಜ್ಯ ನಾಯಕರಾದ ಬಿ.ಜಿ ಹನೀಫ್ ಹಾಜಿ ಉಳ್ಳಾಲ ಕಾರ್ಯಕ್ರಮ ಉದ್ಘಾಟಿಸಿ ತಿಳಿಸಿದರು. ಉಳ್ಳಾಲ ರೇಂಜ್ ಪ್ರಧಾನ ಕಾರ್ಯದರ್ಶಿ ಅಯ್ಯೂಬ್ ಮಹ್ಳರಿ ಶುಭಹಾರೈಸಿ ಮಾತನಾಡಿದರು.
ಬಳಿಕ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಇದರ ಅಧೀನ ಬ್ರಾಂಚುಗಳ ಮೂಲಕ ಸಂಗ್ರಹಿಸಿದ ಮುಅಲ್ಲಿಂ ಫಂಡನ್ನು ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ (ಎಸ್ ಎಂ ಒ) ಉಳ್ಳಾಲ ಇದರ ಅಧ್ಯಕ್ಷರಾದ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ರವರಿಗೆ ಹಸ್ತಾಂತರಿಸಿ, ಸಂಕಷ್ಟ ಅನುಭವಿಸುತ್ತಿರುವ ಉಸ್ತಾದರುಗಳಿಗೆ ಅವರ ಆಡಳಿತ ಸಮಿತಿಯ ಸಮ್ಮುಖದಲ್ಲಿ ನೀಡಲಾಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸ್ಹಾಕ್ ಹಾಜಿ ಪೇಟೆ, ಇಲ್ಯಾಸ್ ಕೈಕೋ, ಅಬ್ದುಲ್ ರಹ್ಮಾನ್ ಅಕ್ಕರೆಕೆರೆ ಹಾಗು ಉಸ್ತಾದರುಗಳು ಮತ್ತು ಮೊಹಲ್ಲಾ ಆಡಳಿತ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ಸ್ವಾಗತಿಸಿದರು.








Comments