KINZ ಫೌಂಡೇಶನ್ ಇದರ ಚೇರ್ಮೆನ್ ಅಲ್ತಾಫ್ ಹುಸೈನ್ ರವರ ಸಮುದಾಯ ಸೇವೆ ಅಭಿನಂದನಾರ್ಹ
ಉಳ್ಳಾಲ ವ್ಯಾಪ್ತಿಯ ಮತ್ತು ಸುತ್ತಮುತ್ತಲ ಊರಿನ ಬಡ ಮತ್ತು ಮಧ್ಯಮ ವರ್ಗದ ಪ್ರತೀ ಮನೆಗಳಿಗೆ ರೇಷನ್ ಸಾಮಗ್ರಿಗಳನ್ನು ತಲುಪಿಸಿದ ಕಿಂಝ್ ಫೌಂಡೇಶನ್ ಇದರ ಚೇರ್ಮೆನ್ ಅಲ್ತಾಫ್ ಹುಸೈನ್ ರವರು ಸಮುದಾಯಕ್ಕೆ ನೀಡಿದ ಸಾಂತ್ವನ ಸೇವೆ ಶ್ಲಾಘನೀಯ ಮತ್ತು ಅಭಿನಂದನಾರ್ಹವಾದುದು. ರಾಜ್ಯ ಮತ್ತು ಕೇಂದ್ರ ಸರಕಾರಗಳು ಇಂತಹ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ನಡೆಸುವ ಅಲ್ತಾಫ್ ಹುಸೈನ್ ರವರಂತಹ ವ್ಯಕ್ತಿತ್ವಗಳನ್ನು ಗುರುತಿಸಿ ಸೂಕ್ತ ಪ್ರಶಸ್ತಿಗಳು ನೀಡಿ ಗೌರವಿಸುವಂತಹ ಕೆಲಸಗಳು ಮಾಡಬೇಕು ಎಂದು ಎಸ್ ವೈ ಎಸ್ ಕರ್ನಾಟಕ ರಾಜ್ಯ ಸದಸ್ಯರಾದ ಬಿ ಜಿ ಹನೀಫ್ ಹಾಜಿ ಉಳ್ಳಾಲ ಆಗ್ರಹಿಸಿದರು. ಅಲ್ತಾಫ್ ಹುಸೈನ್ ರವರ ಈ ಸೇವೆ ಸರ್ವರಿಗೂ ಮಾದರಿಯಾಗಲಿ. ಈ ಸೇವೆಗೆ ಸಹಕಾರ ನೀಡಿದ ಅವರ ಕುಟುಂಬಸ್ಥರು ಮತ್ತು ಅಲ್ಫಾ ಸ್ಪೋರ್ಟ್ಸ್ ಕ್ಲಬ್ ನ ಸದಸ್ಯರಿಗೂ ಹ್ರದಯ ಸ್ಪರ್ಶಿ ಅಭಿನಂದನೆಗಳು.
ಅಭಿನಂದನೆ ಮತ್ತು ಶುಭ ಹಾರೈಕೆಗಳೊಂದಿಗೆ..
SYS ಉಳ್ಳಾಲ ಸೆಂಟರ್

Comments