Skip to main content

ಯಶಸ್ವಿಯಾಗಿ ನಡೆದ SYS ಅಕ್ಕರೆಕೆರೆ ಹಳೆಕೋಟೆ ಬ್ರಾಂಚಿನ ಮಾಸಿಕ ಕಾರ್ಯಕಾರೀ ಸಮಿತಿ ಸಭೆ.


_ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರು ಭಾಗವಹಿಸಿ ಬ್ರಾಂಚಿನ ಮುಂದಿನ ಕಾರ್ಯ ಚಟುವಟಿಕೆಗಳು ಸುಸೂತ್ರವಾಗಿ ನಡೆಯಲು ಕಾರ್ಯ ಯೋಜನೆಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು._

ಕಾರ್ಯಕ್ರಮದ ಕೊನೆಯಲ್ಲಿ SSF ಅಕ್ಕರೆಕೆರೆ ಶಾಖೆಯ ವತಿಯಿಂದ ಇಶಾರ ಅಭಿಯಾನ ನಡೆಯಿತು. SYS ಪ್ರಧಾನ ಕಾರ್ಯದರ್ಶಿ ಖಾಲಿದ್ ಅಕ್ಕರೆಕೆರೆ ಇಶಾರ ಚಂದಾದಾರರಾಗುವ ಮೂಲಕ ಇಶಾರ ಚಂದಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

*ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು*

1 - SYS ಅಕ್ಕರೆಕೆರೆ ಹಳೆಕೋಟೆ ಬ್ರಾಂಚಿನ ವತಿಯಿಂದ ತಾಜುಲ್ ಉಲಮಾ ಖ.ಸಿ ಆರನೇ ಉರೂಸ್ ಮುಬಾರಕ್, ಸಅದಿಯ್ಯ ಸಮ್ಮೇಳನ ಮತ್ತು ನವೆಂಬರ್ ಏಳರಂದು ಮಂಗಳೂರಿನ ಹ್ರದಯ ಭಾಗದಲ್ಲಿ ನಡೆಯಲಿರುವ ಹುಬ್ಬುರ್ರಸೂಲ್ ಮೀಲಾದ್ ಕಾಂಫರೆನ್ಸ್ ಕಾರ್ಯಕ್ರಮದ ಪ್ರಚಾರಾರ್ಥ ಕಟೌಟ್ ಹಾಕುವುದು.

2 - ರಬೀವುಲ್ ಅವ್ವಲ್ 12 ಕ್ಕೆ ಮುಂಚಿತವಾಗಿ ಅಕ್ಕರೆಕೆರೆ ಹಳೆಕೋಟೆ ಬ್ರಾಂಚಿನ ಎಸ್ ವೈ ಎಸ್ ನ ಎಲ್ಲಾ ಕಾರ್ಯಕರ್ತರನ್ನು ಒಟ್ಟುಗೂಡಿಸಿ ಮುಲಾಖಾತ್ ಕಾರ್ಯಕ್ರಮ ಏರ್ಪಡಿಸುವುದು.








Comments