Skip to main content

ಸಸಿ ವಿತರಣಾ ಕಾರ್ಯಕ್ರಮ ಹಾಗು ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ


ಎಸ್ಸೆಸ್ಸೆಫ್ ಹಾಗು ಎಸ್ ವೈ ಎಸ್ ಪಟ್ಲ ಇದರ ಜಂಟಿ ಆಶ್ರಯದಲ್ಲಿ ಪಟ್ಲದ ಸರಕಾರೀ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಳೆಗೊಂದು ನೆರಳು ಎಂಬ ಶೀರ್ಷಿಕೆಯಲ್ಲಿ ಸಸಿ ವಿತರಣಾ ಕಾರ್ಯಕ್ರಮ ಹಾಗು ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಸೆಸ್ಸೆಫ್ ಪಟ್ಲ ಶಾಖಾಧ್ಯಕ್ಷರಾದ ನಝೀರ್ ಪಟ್ಲ ವಹಿಸಿದರು. ತಖ್ವಾ ಜುಮಾ ಮಸೀದಿ ಮುದರ್ರಿಸರಾದ ಇಝ್ಝುದ್ದೀನ್ ಅಹ್ಸನಿ ದುವಾ ನೆರವೇರಿಸಿದರು. ಉಳ್ಳಾಲ ನಗರ ಸಭಾಧ್ಯಕ್ಷರಾದ ಬಾಝಿಲ್ ಡಿಸೋಜ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳಿಗೆ ಸಸಿ ವಿತರಿಸಲಾಯಿತು. ಮಂಗಳೂರು ಉಪ ವಲಯ ಅರಣ್ಯಾಧಿಕಾರಿ ರವಿಕುಮಾರ್ ಮಾತನಾಡಿ ಪರಿಸರ ಸಂರಕ್ಷಣೆಗೆ ಗಿಡ ನೆಡುವುದು ಅನಿವಾರ್ಯ ಎಂದು ತಿಳಿಸಿದರು. ಜೆ. ಸಿ. ಐ. ಮಂಗಳೂರು ಸಾಮ್ರಾಟ್ ಇದರ ಅಧ್ಯಕ್ಷೆ ಅಶ್ವಿನಿ ಐತಾಳ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. 
 ಸ್ವಚ್ಛತೆ ಹಾಗು ಪರಿಸರ ಸಂರಕ್ಷಣೆಯನ್ನೇ ತನ್ನ ದಿನ ನಿತ್ಯದ ಕಾಯಕವಾಗಿಸಿರುವ ಖ್ಯಾತ ಪರಿಸರ ಪ್ರೇಮಿ ಅಬ್ದುಲ್ ರಹ್ಮಾನ್ ಪಟ್ಲ ಹಾಗು ಸಂಜೀವ ಭಂಡಾರಿ ತೋಡುದಳ ಮತ್ತು ಮಂಗಳೂರು ಉಪವಲಯ ಅರಣ್ಯಾಧಿಕಾರಿ ರವಿಕುಮಾರ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಉಳ್ಳಾಲ ಕಾಂಗ್ರೆಸ್ ಮುಖಂಡ ಉಸ್ಮಾನ್ ಕಲ್ಲಾಪು, ಬಿಜೆಪಿ ಮುಖಂಡ ಚಂದ್ರಹಾಸ್ ಪಂಡಿತ್ ಹೌಸ್ ಹಾಗು ದ.ಕ ಜಿಲ್ಲಾ ಟಿಪ್ಪು ಸುಲ್ತಾನ್ ಅಭಿಮಾನಿ ಬಳಗದ ಅಧ್ಯಕ್ಷರಾಗಿರುವ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ಪಟ್ಲ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಅಸ್ಮಾ ಬಾನು, ಖ್ಯಾತ ಉದ್ಯಮಿ ಜೆ.ಸಿ.ಐ ಮಧುಕರ್, ಪಟ್ಲ ಮದ್ರಸ ಅಧ್ಯಾಪಕರಾದ ಮುಹ್ಯಿದ್ದೀನ್ ಮುಸ್ಲಿಯಾರ್, ಜೆಡಿಎಸ್ ಮುಖಂಡರಾದ ಫಯಾಝ್, ಎಸ್ಸೆಸ್ಸೆಫ್ ಪಟ್ಲ ಶಾಖಾ ಪ್ರಧಾನ ಕಾರ್ಯದರ್ಶಿ ಕಿಫಾಯತ್, ಶಾಲಾ ಶಿಕ್ಷಕ ವ್ರಂದ, ಎಸ್ಸೆಸ್ಸೆಫ್, ಎಸ್ ವೈ ಎಸ್ ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
















Comments

Popular posts from this blog

ಎಸ್ ವೈ ಎಸ್ ಉಳ್ಳಾಲ ಮಂಚಿಲ ಸರ್ಕಲ್ ರಚನೆ

ಎಸ್ ವೈ ಎಸ್ ಉಳ್ಳಾಲ ಝೋನ್ ನೇತ್ರತ್ವದಲ್ಲಿ ಎಸ್ ವೈ ಎಸ್ ಮಂಚಿಲ ಸರ್ಕಲ್ ರಚನಾ ಸಭೆ ಉಳ್ಳಾಲ ಮಂಚಿಲದ ಮಂಬವುಲ್ ಉಲೂಂ ಮದ್ರಸ ಸಭಾ ಭವನದಲ್ಲಿ ನಡೆಯಿತು. ಮಂಚಿಲದ ಅಲ್ ಮಸ್ಜಿದುಲ್ ಮುನವ್ವರ್ ಖತೀಬರಾದ ಮುಹಮ್ಮದ್ ಮುದ್ರಿಕ ಮದನಿ ದುಆ ನೆರವೇರಿಸಿದರು. ಸರ್ಕಲ್ ರಚನೆಯ ವೀಡಿಯೋ ನೋಡಲು ನನ್ನನ್ನು ಮುಟ್ಟಿ ಝೋನ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ಸಭೆಯನ್ನು ಉದ್ಘಾಟಿಸಿ ಸಮಾಜದ, ಸಮುದಾಯದ ಸಬಲೀಕರಣ, ಸಾಂಘಿಕ ಶಕ್ತಿ ಮತ್ತು ನಾಯಕರುಗಳ ಸೃಷ್ಟಿಗೆ ಉಳ್ಳಾಲ ಝೋನ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಶಾಖೆಗಳನ್ನು ಸೇರಿಸಿ ಸರ್ಕಲ್ ಗಳನ್ನು ರಚಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.  ಪ್ರಸ್ತುತ ಸಭೆಯಲ್ಲಿ ಅಕ್ಕರೆಕೆರೆ, ಹಳೆಕೋಟೆ, ಮಂಚಿಲ ಮತ್ತು ಮಾರ್ಗತಲೆ ಶಾಖೆಗಳನ್ನು ಸೇರಿಸಿ ಮಂಚಿಲ ಸರ್ಕಲನ್ನು ರಚಿಸಿ ನೂತನ ಸಮಿತಿಯನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಶಮೀರ್ ಸಖಾಫಿ ಅಕ್ಕರೆಕೆರೆ, ಪ್ರಧಾನ ಕಾರ್ಯದರ್ಶಿಯಾಗಿ ಶರೀಫ್ ಮಾರ್ಗತಲೆ, ಕೋಶಾಧಿಕಾರಿಯಾಗಿ ಇರ್ಫಾನ್ ಮಂಚಿಲ, ಉಪಾಧ್ಯಕ್ಷರಾಗಿ ಮುಹಮ್ಮದ್ ಮದನಿ ಹಳೆಕೋಟೆ, ದಅವಾ ಕಾರ್ಯದರ್ಶಿಯಾಗಿ ಆರ್ ಕೆ ಮದನಿ ಅಕ್ಕರೆಕೆರೆ, ಇಸಾಬಃ ಕಾರ್ಯದರ್ಶಿಯಾಗಿ ಸಯೀದ್ ಮಂಚಿಲ, ಸಂಘಟನಾ ಕಾರ್ಯದರ್ಶಿಯಾಗಿ ಹಮೀದ್ ಹಳೆಕೋಟೆ  ಮತ್ತು ಮಾಧ್ಯಮ ವಕ್ತಾರರಾಗಿ ನವಾಝ್ ಸಖಾಫಿ ಉಳ್ಳಾಲ ಇವರನ್ನು ಆಯ್ಕೆ ಮಾಡಲಾಯಿತು. ...

ಕರ್ನಾಟಕ ಮುಸ್ಲಿಂ ಜಮಾಅತ್ ಕೆ ಎಂ ಜೆ ಮತ್ತು ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಶಾಖೆಯ ಆಶ್ರಯದಲ್ಲಿ ಗ್ರ್ಯಾಂಡ್ ಮೌಲಿದ್ ಮಜ್ಲಿಸ್

ಕರ್ನಾಟಕ ಮುಸ್ಲಿಂ ಜಮಾಅತ್ ಕೆ ಎಂ ಜೆ ಮತ್ತು ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಶಾಖೆಯ ಆಶ್ರಯದಲ್ಲಿ ಗ್ರ್ಯಾಂಡ್ ಮೌಲಿದ್ ಮಜ್ಲಿಸ್ ಉಳ್ಳಾಲದ ಅಕ್ಕರೆಕೆರೆಯ ಸಂಘಟನಾ ಕಛೇರಿ ಖುರ್ರತುಸ್ಸಾದಾತ್ ಸುನ್ನೀ ಸೆಂಟರಿನಲ್ಲಿ ನಡೆಯಿತು. ಈ ಸಭೆಯ ವೀಡಿಯೋ ನೋಡಲು ನನ್ನನ್ನು ಮುಟ್ಟಿ ಮೌಲಿದ್ ಮಜ್ಲಿಸಿನ ನೇತ್ರತ್ವವನ್ನು ಅಬೂ ಮಫಾಝ್ ಮದನಿ ವಹಿಸಿದರು. ಎಸ್ ವೈ ಎಸ್ ಶಾಖಾಧ್ಯಕ್ಷರಾದ ಅಶ್ರಫ್ ಝುಹ್ರಿ ಮಾತನಾಡಿ ವಾರಕ್ಕೊಮ್ಮೆ ಶುಕ್ರವಾರ ಸುಬಹ್ ನಮಾಝ್ ಬಳಿಕದ ಮಜ್ಲಿಸ್, ಮಾಸಿಕ ಮಹ್ಳರತುಲ್ ಬದ್ರಿಯ್ಯಃ ಮಜ್ಲಿಸ್ ಹಾಗು ಶಾಖೆಯ ಆಶ್ರಯದಲ್ಲಿ ನಡೆಯುವ ಇತರ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ರಬೇಕೆಂದು ತಿಳಿಸಿದರು. ನವಾಝ್ ಸಖಾಫಿ ಉಳ್ಳಾಲ ದುಆ ನೆರವೇರಿಸಿದರು. ಎಸ್ ವೈ ಎಸ್ ಶಾಖಾ ಕೋಶಾಧಿಕಾರಿ ಆರ್ ಕೆ ಮದನಿ  ಕಾರ್ಯಕ್ರಮ ನಿರ್ವಹಣೆ ಮಾಡಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಕೆ ಎಂ ಜೆ ಶಾಖಾಧ್ಯಕ್ಷರಾದ ಹಸನ್ ಹಾಜಿ ಉಳ್ಳಾಲ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಪಟೇಲ್ ಕಂಪೌಂಡ್ ಮತ್ತು ಶಾಖಾ ನಾಯಕರು, ಸದಸ್ಯರು, ಹಿತೈಷಿಗಳು ಭಾಗವಹಿಸಿದರು.

ಕೂರತ್ ತಂಙಳ್ ಪ್ರಥಮ ಉರೂಸ್ ಪ್ರಚಾರ ಸಭೆ ಹಾಗು ಅನುಸ್ಮರಣಾ ಕಾರ್ಯಕ್ರಮ

ಉಳ್ಳಾಲ : ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ಸೆಸ್ಸೆಫ್ ಅಕ್ಕರೆಕೆರೆ ಹಳೆಕೋಟೆ ಶಾಖೆಯ ವತಿಯಿಂದ ಖುರ್ರತುಸ್ಸಾದಾತ್ ಸಯ್ಯಿದ್ ಕೂರತ್ ತಂಙಳ್ ರವರ ಪ್ರಥಮ ಉರೂಸ್ ಪ್ರಚಾರ ಸಭೆ ಹಾಗು ಅನುಸ್ಮರಣಾ ಕಾರ್ಯಕ್ರಮ ಉಳ್ಳಾಲ ಅಕ್ಕರೆಕೆರೆಯ ಖುರ್ರತುಸ್ಸಾದಾತ್ ಸುನ್ನೀ ಸೆಂಟರಿನಲ್ಲಿ ನಡೆಯಿತು.  ಕಾರ್ಯಕ್ರಮದ ವೀಡಿಯೋ ನೋಡಲು ನನ್ನನ್ನು ಮುಟ್ಟಿ ಕೆ ಎಂ ಜೆ ಅಧ್ಯಕ್ಷರಾದ ಹಸನ್ ಹಾಜಿ ಉಳ್ಳಾಲ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಕೋಟೆಕಾರ್ ಜುಮಾ ಮಸ್ಜಿದ್ ಮುದರ್ರಿಸ್ ಅಬ್ದುರ್ರಝ್ಝಾಖ್ ಸಅದಿ ಮದಕ ಅನುಸ್ಮರಣಾ ಭಾಷಣ ಮಾಡಿದರು. ಎಸ್ ವೈ ಎಸ್ ಉಳ್ಳಾಲ ಝೋನ್ ನಾಯಕ ಸಯ್ಯಿದ್ ಖುಬೈಬ್ ತಂಙಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಸೂರಃ ಯಾಸೀನ್ ಪಾರಾಯಣ, ತಹ್ಲೀಲ್ ಸಮರ್ಪಣೆ ನಡೆಸಲಾಯಿತು. ಎಸ್ಸೆಸ್ಸೆಫ್ ನಾಯಕ ಆಶಿಖ್ ಹಿಮಮಿ ಸಖಾಫಿ ನಶೀದಃ ಹಾಡಿದರು. ಝೋನ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ, ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಹ್ಮದ್ ಹಳೆಕೋಟೆ, ಕೋಶಾಧಿಕಾರಿ ಶರೀಫ್ ಮಂಚಿಲ, ಝೋನ್ ನಾಯಕರಾದ ಇಸಾಖ್ ಪೇಟೆ, ಎಸ್ ವೈ ಎಸ್ ಶಾಖಾಧ್ಯಕ್ಷರಾದ ಅಶ್ರಫ್ ಝುಹ್ರಿ ಅಕ್ಕರೆಕೆರೆ, ಕೋಶಾಧಿಕಾರಿ ಆರ್ ಕೆ ಮದನಿ, ಕೆ ಎಂ ಜೆ  ಕೋಶಾಧಿಕಾರಿ ಅಬ್ದುಲ್ ರಹ್ಮಾನ್ ಅಕ್ಕರೆಕರೆ, ಮುಹಮ್ಮದ್ ಮದನಿ ಹಳೆಕೋಟೆ ಸಹಿತ ಸಂಘಟನಾ ನಾಯಕರು, ಸದಸ್ಯರು, ಹಿತೈಷಿಗಳು ಭಾಗವಹಿಸಿದರು. ...