ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧೀನದ ಹನ್ನೊಂದನೇ ನೂತನ ಬ್ರಾಂಚಾಗಿ ಎಸ್ ವೈ ಎಸ್ ಪಟ್ಲ ಬ್ರಾಂಚ್ ಪಟ್ಲದಲ್ಲಿ ಅಸ್ತಿತ್ವಕ್ಕೆ ತರಲಾಯಿತು.
ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಪಟ್ಲ ತಖ್ವಾ ಜುಮಾ ಮಸೀದಿ ಖತೀಬರಾದ ಮೋಙಂ ಫೈಝಿ ಉದ್ಘಾಟಿಸಿದರು.
2019 ನೇ ಸಾಲಿನ ಎಸ್ ವೈ ಎಸ್ ಪಟ್ಲ ಬ್ರಾಂಚಿಗೆ ನೂತನ ಸಮಿತಿಯನ್ನು ಆಯ್ಕೆಮಾಡಲಾಯಿತು. ಅಧ್ಯಕ್ಷರಾಗಿ ಶರೀಫ್ ಅಮ್ಜದಿ ಪಟ್ಲ, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಪಟ್ಲ, ಕೋಶಾಧಿಕಾರಿಯಾಗಿ ಯೂಸುಫ್, ಉಪಾಧ್ಯಕ್ಷರಾಗಿ ಮುಸ್ತಫ ಫ್ರೂಟ್ಸ್, ಜೊತೆ ಕಾರ್ಯದರ್ಶಿಯಾಗಿ ಯೂಸುಫ್ ರಿಕ್ಷಾ ಇವರುಗಳನ್ವು ಆರಿಸಲಾಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಸೆಂಟರ್ ಮೀಡಿಯ ವಕ್ತಾರ ನವಾಝ್ ಸಖಾಫಿ ಉಳ್ಳಾಲ ಹಾಗು ಪಟ್ಲ ಬ್ರಾಂಚ್ ನೂತನ ಉಪಾಧ್ಯಕ್ಷರಾದ ಮುಸ್ತಫ ಫ್ರೂಟ್ಸ್ ಶುಭಾಶಂಶೆಗಶನ್ನು ತಿಳಿಸಿದರು. ಸೆಂಟರ್ ಪ್ರಧಾನ ಕಾರ್ಯದರ್ಶಿ ಬಶೀರ್ ಸಖಾಫಿ ಉಳ್ಳಾಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
Comments