__________________________________
ಸಾಂತ್ವನ ಸೇವೆಗಳ ಮೂಲಕ ಬಡ ನಿರ್ಗತಿಕರ, ಅನಾಥರ, ರೋಗಿಗಳ ಆಶಾಕಿರಣವಾಗಿ ಸದಾ ಸಹಾಯ ಹಸ್ತ ಚಾಚುತ್ತಿರುವ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಾಂತ್ವನ ವಿಭಾಗದ ವತಿಯಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಓರ್ವ ಉಸ್ತಾದರಿಗೆ ಹತ್ತು ಸಾವಿರ ರೂಪಾಯಿ ಸಹಾಯ ಧನ ಹಾಗು ಹ್ರದಯದ ತೊಂದರೆಯಿಂದ ಬಳಲುತ್ತಿರುವ ಮತ್ತೋರ್ವರ ಚಿಕಿತ್ಸೆಗಾಗಿ ಐದು ಸಾವಿರ ರೂಪಾಯಿ ಧನ ಸಹಾಯ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಾಂತ್ವನ ವಿಭಾಗದ ಚೇರಮಾನ್ ಅಲ್ತಾಫ್ ಕುಂಪಲ, ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಳ್, ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ ಅಧ್ಯಕ್ಷರಾದ ಪಿ ಎಸ್ ಮುಹಮ್ಮದ್ ಶಿಹಾಬುದ್ದೀನ್ ಅಶ್ರಫಿ ಸಖಾಫಿ ಉಳ್ಳಾಲ, ಸೆಂಟರ್ ಉಪಾಧ್ಯಕ್ಷರಾದ ತ್ವಾಹಿರ್ ಹಾಜಿ, ಹೈದರ್ ಮುಕ್ಕಚ್ಚೇರಿ, ಅಬ್ದುರ್ರಹ್ಮಾನ್ ಅಕ್ಕರೆಕೆರೆ, ಯೂಸುಫ್ ಮಿಲ್ಲತ್ ನಗರ, ಅಶ್ರಫ್ ಸುಂದರಭಾಗ್, ಅಬ್ದುಸ್ಸಮದ್ ಹಳೆಕೋಟೆ, ನೌಶಾದ್ ಕೋಡಿ ಹಾಗು ಇನ್ನಿತರರು ಉಪಸ್ಥಿತರಿದ್ದರು.
Comments