Skip to main content

ಉಳ್ಳಾಲ : ಮಾಸಿಕ ಅಕ್ಕಿ ವಿತರಣೆಗೆ ಚಾಲನೆ



SYS ಉಳ್ಳಾಲ ಸೆಂಟರ್ ಸಾಂತ್ವನ ವಿಭಾಗದ ಆಶ್ರಯದಲ್ಲಿ ವಿಶೇಷ ಸಭೆ ಸಾಂತ್ವನ ವಿಭಾಗ ಚೇರಮಾನ್ ಅಲ್ತಾಫ್ ಕುಂಪಲ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
SYS ಉಳ್ಳಾಲ ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ದುವಾ ನೆರವೇರಿಸಿದರು. ಸಾಂತ್ವನ ವಿಭಾಗದ ಮುಕ್ಕಚ್ಚೇರಿ ಸಂಚಾಲಕ ಮುಸ್ತಫ ಮಾಸ್ಟರ್ ಕಾರ್ಯಕ್ರಮ ಉದ್ಘಾಟಿಸಿದರು. ಅಲ್ತಾಫ್ ಕುಂಪಲ ವಿಷಯ ಮಂಡಿಸಿದರು. ಈ ಸಂದರ್ಭದಲ್ಲಿ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಾಂತ್ವನ ವಿಭಾಗದ ಆಶ್ರಯದಲ್ಲಿ ಬಡ ನಿರ್ಗತಿಕರಿಗೆ ಮಾಸಿಕ ಅಕ್ಕಿ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ SYS ಉಳ್ಳಾಲ ಸೆಂಟರ್ ಉಪಾಧ್ಯಕ್ಷರಾದ ಹೈದರ್ ಮುಕ್ಕಚ್ಚೇರಿ, ಎಸ್ ವೈ ಎಸ್ ಉಳ್ಳಾಲ ಸೆಂಟರ್ ಕಾರ್ಯಕಾರಿ ಸಮಿತಿ ಸದಸ್ಯ ಸಯೀದ್ ಮಂಚಿಲ, ಸೆಂಟರ್ ಜೊತೆ ಕಾರ್ಯದರ್ಶಿ ಇಲ್ಯಾಸ್ ಕೈಕೋ, ಅತೀಖ್ ಕೋಡಿ ಹಾಗು ಎಸ್ಸೆಸ್ಸೆಫ್ ಹಳೆಕೋಟೆ ಶಾಖಾ ಪ್ರಧಾನ ಕಾರ್ಯದರ್ಶಿ ತಾಜುದ್ದೀನ್ ಉಪಸ್ಥಿತರಿದ್ದರು.

Comments