ಎಸ್ ವೈ ಎಸ್ ಉಳ್ಳಾಲ ಸೆಂಟರ್ ಹಾಗು ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಇದರ ಜಂಟಿ ವಿಶೇಷ ಸಮಿತಿ ಸಭೆ ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಳ್ ಅಧ್ಯಕ್ಷತೆಯಲ್ಲಿ ಹಾಶಿಂ ಟವರ್ ನಲ್ಲಿ ನಡೆಯಿತು.
ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ದುವಾ ನೆರವೇರಿಸಿದರು. ಸೆಂಟರ್ ಪ್ರಧಾನ ಕಾರ್ಯದರ್ಶಿ ಬಿ.ಜಿ ಹನೀಫ್ ಹಾಜಿ ಸ್ವಾಗತಿಸಿದರು. ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್, ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಳ್ ಹಾಗು ಸೆಂಟರ್ ಕಾರ್ಯದರ್ಶಿಗಳಾದ ಅಲ್ತಾಫ್ ಕುಂಪಲ ಮತ್ತು ಮನ್ಸೂರ್ ಹಳೆಕೋಟೆ ಮಾತನಾಡಿದರು. ಬಳಿಕ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧೀನದಲ್ಲಿ ಸಾಂತ್ವನ ವಿಭಾಗ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ಸಾಂತ್ವನ ವಿಭಾಗದ ಚೇರಮಾನ್ ಆಗಿ ಅಲ್ತಾಫ್ ಕುಂಪಲ, ಪ್ರಧಾನ ಕಾರ್ಯದರ್ಶಿಯಾಗಿ ಮನ್ಸೂರ್ ಹಳೆಕೋಟೆ, ಕೋಶಾಧಿಕಾರಿಯಾಗಿ ತ್ವಾಹಿರ್ ಹಾಜಿ ಮುಕ್ಕಚ್ಚೇರಿ, ಲೆಕ್ಕ ಪರಿಶೋಧಕರಾಗಿ ಫಾರೂಖ್ ಬೊಟ್ಟು, ವೈಸ್ ಚೇರಮಾನ್ ಆಗಿ ಸತ್ತಾರ್ ಮೇಲಂಗಡಿ, ಜೊತೆ ಕಾರ್ಯದರ್ಶಿಗಳಾಗಿ ಅತೀಖ್ ಕೋಡಿ ಹಾಗು ಮುಹಮ್ಮದ್ ಕೈಕೋ ಮತ್ತು 16 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಹಾಗು ಎಸ್ ವೈ ಎಸ್ ಉಳ್ಳಾಲ ಸೆಂಟರ್ ಇದರ ಸಮಿತಿ ಸದಸ್ಯರು ಹಾಗು ಕಾರ್ಯಕಾರಿ ಸದಸ್ಯರು ಉಪಸ್ಥಿತರಿದ್ದರು.
ಎಸ್ ವೈ ಎಸ್ ಉಳ್ಳಾಲ ಝೋನ್ ನೇತ್ರತ್ವದಲ್ಲಿ ಎಸ್ ವೈ ಎಸ್ ಮಂಚಿಲ ಸರ್ಕಲ್ ರಚನಾ ಸಭೆ ಉಳ್ಳಾಲ ಮಂಚಿಲದ ಮಂಬವುಲ್ ಉಲೂಂ ಮದ್ರಸ ಸಭಾ ಭವನದಲ್ಲಿ ನಡೆಯಿತು. ಮಂಚಿಲದ ಅಲ್ ಮಸ್ಜಿದುಲ್ ಮುನವ್ವರ್ ಖತೀಬರಾದ ಮುಹಮ್ಮದ್ ಮುದ್ರಿಕ ಮದನಿ ದುಆ ನೆರವೇರಿಸಿದರು. ಸರ್ಕಲ್ ರಚನೆಯ ವೀಡಿಯೋ ನೋಡಲು ನನ್ನನ್ನು ಮುಟ್ಟಿ ಝೋನ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ಸಭೆಯನ್ನು ಉದ್ಘಾಟಿಸಿ ಸಮಾಜದ, ಸಮುದಾಯದ ಸಬಲೀಕರಣ, ಸಾಂಘಿಕ ಶಕ್ತಿ ಮತ್ತು ನಾಯಕರುಗಳ ಸೃಷ್ಟಿಗೆ ಉಳ್ಳಾಲ ಝೋನ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಶಾಖೆಗಳನ್ನು ಸೇರಿಸಿ ಸರ್ಕಲ್ ಗಳನ್ನು ರಚಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು. ಪ್ರಸ್ತುತ ಸಭೆಯಲ್ಲಿ ಅಕ್ಕರೆಕೆರೆ, ಹಳೆಕೋಟೆ, ಮಂಚಿಲ ಮತ್ತು ಮಾರ್ಗತಲೆ ಶಾಖೆಗಳನ್ನು ಸೇರಿಸಿ ಮಂಚಿಲ ಸರ್ಕಲನ್ನು ರಚಿಸಿ ನೂತನ ಸಮಿತಿಯನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಶಮೀರ್ ಸಖಾಫಿ ಅಕ್ಕರೆಕೆರೆ, ಪ್ರಧಾನ ಕಾರ್ಯದರ್ಶಿಯಾಗಿ ಶರೀಫ್ ಮಾರ್ಗತಲೆ, ಕೋಶಾಧಿಕಾರಿಯಾಗಿ ಇರ್ಫಾನ್ ಮಂಚಿಲ, ಉಪಾಧ್ಯಕ್ಷರಾಗಿ ಮುಹಮ್ಮದ್ ಮದನಿ ಹಳೆಕೋಟೆ, ದಅವಾ ಕಾರ್ಯದರ್ಶಿಯಾಗಿ ಆರ್ ಕೆ ಮದನಿ ಅಕ್ಕರೆಕೆರೆ, ಇಸಾಬಃ ಕಾರ್ಯದರ್ಶಿಯಾಗಿ ಸಯೀದ್ ಮಂಚಿಲ, ಸಂಘಟನಾ ಕಾರ್ಯದರ್ಶಿಯಾಗಿ ಹಮೀದ್ ಹಳೆಕೋಟೆ ಮತ್ತು ಮಾಧ್ಯಮ ವಕ್ತಾರರಾಗಿ ನವಾಝ್ ಸಖಾಫಿ ಉಳ್ಳಾಲ ಇವರನ್ನು ಆಯ್ಕೆ ಮಾಡಲಾಯಿತು. ...
Comments